ಕಿಟಕಿ ಮೆಸ್ ತೆಗೆದು ಚಿನ್ನಾಭರಣ ಕಳುವು
ಕ.ಪ್ರ.ವಾರ್ತೆ, ಶಿವಮೊಗ್ಗ, ಮೇ 14
ಮನೆ ಕಿಟಕಿಯ ಮೆಸ್ ಕಟ್ ಮಾಡಿ ಪರ್ಸ್ನಲ್ಲಿದ್ದ ಸಾವಿರಾರು ರುಪಾಯಿ ಮೌಲ್ಯದ ಮಾಂಗಲ್ಯ ಸರ ಅಪಹರಣ ಮಾಡಿರುವ ಘಟನೆ ಚಾಲುಕ್ಯ ನಗರದ ನ್ಯೂ.ಕೆ.ಎಚ್.ಬಿ. ಕಾಲೋನಿಯಲ್ಲಿ ನಡೆದಿದೆ.
ಇಲ್ಲಿನ ಮಮತ ಎಂಬವರ ಮನೆಯಲ್ಲಿ ಘಟನೆ ನಡೆದಿದ್ದು, ಮನೆಯ ಬೆಡ್ ರೂಮಿನ ಕಿಟಕಿಯ ಮೆಸ್ ಕಟ್ ಮಾಡಿ, ಕಿಟಕಿ ಬಳಿ ಇದ್ದಂತಹ ಮಿರರ್ ಸ್ಟ್ಯಾಂಡ್ ಮೇಲೆ ಇಡಲಾಗಿದ್ದ ಪರ್ಸ್ನಲ್ಲಿ ಇಟ್ಟಿದ್ದ ಸುಮಾರು 30 ಗ್ರಾಂ ತೂಕದ ಮಾಂಗಲ್ಯಸರ, 5 ಗ್ರಾಂನ ಬಂಗಾರದ ಪೆಂಡೆಂಟ್ ಹಾಗೂ 1 ಸಾವಿರ ರುಪಾಯಿ ನಗದು, ಮತ್ತೊಂದು ಪರ್ಸ್ನಲ್ಲಿದ್ದ ಸುಮಾರು 6 ಗ್ರಾಂ ತೂಕದ ಒಂದು ಜೊತೆ ಬಂಗಾರದ ಕಿವಿಯ ಓಲೆಗಳನ್ನು ಕಳುವು ಮಾಡಲಾಗಿದೆ. ಕಳುವಾದ ಆಭರಣಗಳ ಮೌಲ್ಯ ಸುಮಾರು 61 ಸಾವಿರ ರುಪಾಯಿ ಎಂದು ಅಂದಾಜಿಸಲಾಗಿದೆ. ಪ್ರಕರಣ ತುಂಗಾನಗರ ಠಾಣೆಯಲ್ಲಿ ದಾಖಲಾಗಿದೆ.