ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕೇಶವಮೂರ್ತಿಗೆ ನಗದು ಬಹುಮಾನ

Lingaraj Badiger
Updated On : 15 May 2013, 10:59 am

ಮೂಡಿಗೆರೆ: ಕಿರುಗುಂದ ಗ್ರಾಮದ ಸ್ಪಂಧನ ವೇದಿಕೆ ನಡೆಸಿದ ಮೂಡಿಗೆರೆ ಕ್ಷೇತ್ರದಲ್ಲಿ ಗೆಲ್ಲುವ ಶಾಸಕರು ಯಾರು ಎನ್ನುವ ಕುರಿತು ಸರಿಯುತ್ತರ ಕಳುಹಿಸಿದವರಲ್ಲಿ ಚಿಕ್ಕಮಗಳೂರು ನಗರದ ಕೇಶವಮೂರ್ತಿ ನಗದು ಬಹುಮಾನ ಗಳಿಸಿದ್ದಾರೆ ಎಂದು ವೇದಿಕೆ ತಿಳಿಸಿದೆ.  ಇತ್ತೀಚೆಗೆ ನಡೆದ ವಿಧಾನಸಬಾ ಚುನಾವಣೆಯಲ್ಲಿ ಈ ಬಗ್ಗೆ ಸಾರ್ವಜನಿಕರಿಂದ ಸರಿಯುತ್ತರ ಆಹ್ವಾನಿಸಲಾಗಿತ್ತು. ಜೆಡಿಎಸ್ ಅಭ್ಯರ್ಥಿ ನಿಂಗಯ್ಯ ಗೆಲ್ಲುವ ಕುರಿತು 327 ಮಂದಿ, ಎಸ್‌ಎಂಎಸ್ ಮೂಲಕ ರವಾನಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ  ಚಂದ್ರಪ್ಪಪರ 318 ಮತ್ತು ಬಿಜೆಪಿಯ ಕುಮಾರಸ್ವಾಮಿ ಪರ 312 ಉತ್ತರಗಳು ಬಂದಿದ್ದವು.

ಎತ್ತಿಗೆ ಸಿಂಗರಿಸಿ ಬಸವ ಜಯಂತಿ ಆಚರಣೆ
ಕ.ಪ್ರ.ವಾರ್ತ್ಣೆ ಕಡೂರ್ಣು ಮೇ 14
ಬಸವ ಜಯಂತಿ ಅಂಗವಾಗಿ ಕಡೂರು ಪಟ್ಟಣದಲ್ಲಿ ರೈತರು ಬಸವ ಜಯಂತಿಯನ್ನು ವಿಶಿಷ್ಟವಾಗಿ ಆಚರಿಸಿದರು.
  ನೂರಾರು ಜೊತೆ ಎತ್ತುಗಳನ್ನು ಚೆಂದವಾಗಿ ಸಿಂಗರಿಸಿ ಕಡೂರು ಪಟ್ಟಣದ ಚಂದ್ರಮೌಳೇಶ್ವರ ದೇವಾಲಯದ ಆವರಣಕ್ಕೆ ತರಲಾಗಿತ್ತು. ನಂತರ ಚಂದ್ರಮೌಳೇಶ್ವರಸ್ವಾಮಿ ದೇವರಿಗೆ ಪೂಜೆ ಸಲ್ಲಿಸಿ ಎತ್ತುಗಳನ್ನೂ  ಪೂಜಿಸಲಾಯಿತು.
ರಾ.ಹೆ.ಯಲ್ಲಿ ಮೆರವಣಿಗೆ: ಕದಂಬ ಯುವಕ ಸಂಘದ ಅಧ್ಯಕ್ಷ ಕೆ.ಎಸ್.ವೆಂಕಟೇಶ್, ಜೆಡಿಎಸ್ ಮುಖಂಡ ಕೆ. ಎಸ್. ತಿಪ್ಪೇಶ್ ಮತ್ತು ಪುರಸಭಾ ಸದಸ್ಯ ಮಂಜುನಾಥ್ ನೇತೃತ್ವದಲ್ಲಿ ರೈತರು ಎತ್ತುಗಳನ್ನು ಶಿವಮೊಗ್ಗ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಾಗುವ ಕಡೂರು ಪಟ್ಟಣದ ರಸ್ತೆಯುದ್ದಕ್ಕೂ ಮೆರವಣೆಗೆ ನಡೆಸಲಾಯಿತು.
  ದಾರಿಯುದ್ದಕ್ಕೂ ಬಸವೇಶ್ವರರ ಪರವಾಗಿ ಘೋಷಣೆ ಕೂಗುತ್ತಾ ವಿವಿಧ ಪ್ರಕಾರದ ವಾದ್ಯಗಳೊಂದಿಗೆ  ಮರವಣೆಗೆ ನಡೆಸಲಾಯಿತು. ಕಡೂರು ಪಟ್ಟಣದ ಕೆ.ಎಂ. ರಸ್ತೆ ಮೂಲಕ ಸಾಗಿದ ಮೆರವಣೆಗೆ ಸ್ಟೇಷನ್ ರಸ್ತೆಗೆ ಸಾಗಿ ಹಳೇಪೇಟೆಯಲ್ಲಿರುವ ಮರುಳಸಿದ್ದೇಶ್ವರ ಸ್ವಾಮಿ ದೇವಾಲಯ ಮತ್ತು ಅಂತರಘಟ್ಟಮ್ಮ ದೇವಾಲಯದತ್ತಸಾಗಿತು.
ರೈತರ ಒಡನಾಡಿ: ಈ ಸಂದರ್ಭದಲ್ಲಿ ಬಸವ ಜಯಂತಿ ಆಚರಣೆ ಕುರಿತು ಮಾತನಾಡಿದ ಮುಖಂಡರು,  ಬಸವೇಶ್ವರರ ಸ್ಮರಣೆಯಲ್ಲಿ ರೈತರ ಒಡನಾಡಿ ಮತ್ತು ಮಿತ್ರನಾಗಿ ಹಗಲಿರುಳೂ ರೈತನೊಂದಿಗೆ ಶ್ರಮವಹಿಸುವ ಈ ಬಸವ ನಮ್ಮ ರೈತರೊಂದಿಗೆ ತನ್ನ ಶ್ರಮವನ್ನು ಹಾಕುವ ಮೂಲಕ ನಮ್ಮ ಕುಟಂಬಕ್ಕೆ ಅನ್ನ ನೀಡುತ್ತಾನೆ.
    ಈ ಹಿನ್ನೆಲೆಯಲ್ಲಿ ಬಸವಣ್ಣನನ್ನು ನೆನೆಯುವ ಮೂಲಕ ಈ ರೀತಿ ಬಸವ ಜಯಂತಿ  ಆಚರಿಸಲಾಗುತ್ತಿದೆ. ಇದು ಮುಂದಿನ ಪರಂಪರೆಗೆ ಉಳಿಯಬೇಕು ಎನ್ನುವುದು ನಮ್ಮ ಮನೋಭಿಲಾಷೆ ಆಗಿರುವುದರಿಂದ ಹಿರಿಯರು ಹಾಕಿಕೊಟ್ಟ ರೀತಿಯಲ್ಲಿಯೇ ಬಸವ ಜಯಂತಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಸಾದ ವಿನಿಯೋಗ ಕೂಡ ಮಾಡಲಾಗುತ್ತಿದೆ ಎಂದು ಹೇಳಿದರು.
 ಬಸವ ಜಯಂತಿ ಸಂದರ್ಭದಲ್ಲಿ ಮುಖಂಡ ಮಲ್ಲೇಶ್, ಹೂವಿನ ರಮೇಶ್, ಮನು ಸೇರಿದಂತೆ ಹಲವಾರು ರೈತರು ಉಪಸ್ಥಿರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement