ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಚಿಕ್ಕಮಾಕೊಪ್ಪ ರಾಜಿನಾಮೆ

Lingaraj Badiger
Updated On : 15 May 2013, 10:55 am

ಸೊರಬ: ರಾಜ್ಯದಲ್ಲಿ ಹಾಗೂ ತಾಲೂಕಿನಲ್ಲಿ ಬಿಜೆಪಿ ಕಂಡ ಹೀನಾಯ ಸೋಲು ಗಮನಿಸಿ ನೈತಿಕ ಹೊಣೆ ಹೊತ್ತು ಎಪಿಎಂಸಿ ಸದಸ್ಯತ್ವ ಸ್ಥಾನಕ್ಕೆ ರಾಜಿನಾಮೆ ನೀಡಿರುವುದಾಗಿ ಸಣ್ಣಪ್ಪ ಚಿಕ್ಕಮಾಕೊಪ್ಪ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಎಪಿಎಂಸಿ ಅಧ್ಯಕ್ಷ ಉಳವಿ ಗಜಾನನರಾವ್ ಅವರಿಗೆ ರಾಜಿನಾಮೆ ಪತ್ರ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ಇಂದು ರಥೋತ್ಸವ
ಶಿವಮೊಗ್ಗ: ಗೋಪಿಶೆಟ್ಟಿಕೊಪ್ಪದ ಶ್ರೀ ಸಿದ್ದೇಶ್ವರಸ್ವಾಮಿ ಮತ್ತು ಶ್ರೀ ಬಸವೇಶ್ವರಸ್ವಾಮಿಯ ರಥೋತ್ಸವ ಮೇ 15ರಂದು ಬೆಳಗ್ಗೆ 10.30 ರಿಂದ 12 ಗಂಟೆವರೆಗೆ ನಡೆಯಲಿದೆ. ಬೆಳಗ್ಗೆ 8.30ರಿಂದ 10.30ರ ವರೆಗೆ ಶ್ರೀ ಸಿದ್ದೇಶ್ವರ ಸ್ವಾಮಿಯ ಮೂಲ ಸ್ಥಾನವಾದ ಕಲ್ಲೂರುಗುಡಕ್ಕೆ ಹೋಗಿ ಶ್ರೀ ಭೂತೇಶ್ವರ ಸ್ವಾಮಿ ಪೂಜೆ ಸಲ್ಲಿಸಲಾಗುವುದು.
ಸ್ವರ್ಣ ಬಿಂದು ಪ್ರಾಶನ ನಾಳೆ
ಶಿವಮೊಗ್ಗ: ನಿದಿಗೆಯ ಟಿಎಂಎಇಎಸ್ ಆರ್ಯುವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಮೇ 16ರಂದು ನಗರದ 4 ಸ್ಥಳಗಳಲ್ಲಿ ಮಕ್ಕಳ ನಿರೋಧಕ ಹಾಗೂ ಸ್ಮರಣಶಕ್ತಿ ವೃದ್ಧಿಗಾಗಿ ಸ್ವರ್ಣ ಬಿಂದು ಪ್ರಾಶನ ಕಾರ್ಯಕ್ರಮ ಹಮ್ಮಿಕೊಂಡಿದೆ. ಜಯನಗರದ ಸರ್ವೋದಯ ಶಾಲೆಯ ಹತ್ತಿರದ ಜೋಷಿ ಆಯುರ್ಕೇರ್, ಕೆ.ಆರ್. ಪುರಂನ ನಿರ್ಮಲ ಕ್ಲಿನಿಕ್, ಓ.ಟಿ. ರಸ್ತೆ, ಸೀಗೇಹಟ್ಟಿಯಲ್ಲಿರುವ ಜನನಿ ಕ್ಲಿನಿಕ್ ಮತ್ತು ಮಲವಗೊಪ್ಪದ ಗಾಯಿತ್ರಿ ಕ್ಲಿನಿಕ್‌ನಲ್ಲಿ ಪ್ರಾಶನ ಮಾಡಲಾಗುವುದು. ವಿವರಗಳಿಗಾಗಿ- 9845410578.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement