ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಪಕ್ಷ ಸಂಘಟನೆಗೆ ಜೆಡಿಯು ಹೆಚ್ಚು ಒತ್ತು

Lingaraj Badiger
Updated On : 15 May 2013, 10:46 am

ಶಿವಮೊಗ್ಗ: ಮುಂದಿನ ಕೆಲ ತಿಂಗಳಲ್ಲಿ ಲೋಕಸಭಾ ಚುನಾವಾಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಜೆಡಿಯು ಜಿಲ್ಲಾಧ್ಯಕ್ಷರಾದ ಮಂಜುಳಾದೇವಿ ತಿಳಿಸಿದರು.
 ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಎದುರಿಸಲು ಈಗಾಗಲೇ ಪಕ್ಷದ ಕಾರ್ಯಕರ್ತರು ಜಿಲ್ಲೆಯಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಈ ಕ್ಷಣದಿಂದಲ್ಲೇ ಅದಕ್ಕೆ ಬೇಕಾದ ಎಲ್ಲಾ ರೀತಿಯ ತಯಾರಿಯನ್ನು ಪಕ್ಷದ ಜಿಲ್ಲಾ ಮುಖಂಡರು ಮಾಡುತ್ತಿದ್ದಾರೆ ಎಂದರು.
ಜೆ.ಪಿ. ಸಿದ್ಧಾಂತ: ಜಯಪ್ರಕಾಶ್ ನಾರಾಯಣ ನೀಡಿರುವ ಸಿದ್ಧಾಂತಗಳ ಆಧಾರದ ಮೇಲೆ ಪಕ್ಷ ನಡೆಯುತ್ತಿದ್ದು, ಜೆ.ಎಚ್. ಪಟೇಲ್ ಅವರು ನೀಡಿರುವ ಜನಪರ ಯೋಜನೆ ಮುಂದಿಟ್ಟು ಲೋಕಸಭಾ ಚುನಾವಣೆ ಎದುರಿಸಲಿದ್ದೇವೆ ಎಂದ ಅವರು, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಯವಕರಿಗೆ ಹೆಚ್ಚು ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
 ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪಟೇಲ್ ಮಾತನಾಡಿ, ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯಾದ್ಯಂತ 120 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಉತ್ತಮ ಬೆಂಬಲ ದೊರೆತಿದೆ. ಹಣ, ಹೆಂಡವಿಲ್ಲದೇ ಮುಂದಿನ ಲೋಕಸಭಾ ಚುನಾವಣೆಯನ್ನು ಪಕ್ಷ ಎದುರಿಸಲಿದೆ ಎಂದರು.
ಎಲ್. ಚಂದ್ರನಾಯ್ಕ ಮಾತನಾಡಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡ ಪ್ರಹ್ಲಾದ್, ರವಿ ಕಿಶನ್, ಕಲ್ಪನ ಎ. ನಾಡಿಗ್ ಶರ್ಮ, ಸಂಭೋಜಿರಾವ್ ಮೊದಲಾದವರು  ಈ ಸಂದರ್ಭದಲ್ಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement