ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ವಾಂತಿಭೇದಿ: ಆಸ್ಪತ್ರೆಗೆ ದಾಖಲು

Lingaraj Badiger
Updated On : 15 May 2013, 10:54 am

ಕ.ಪ್ರ.ವಾರ್ತೆ, ಸೊರಬ,  ಮೇ 14
ಮದುವೆ ಊಟಕ್ಕೆ ತೆರಳಿದ್ದ ಕೆಲವರಿಗೆ ವಾಂತಿಬೇಧಿ ಆಗಿ ಆಸ್ಪತ್ರೆಗೆ ದಾಖಲಾದ ಘಟನೆ ತಾಲೂಕಿನ ಪುಟ್ನಳ್ಳಿ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಪುಟ್ನಳ್ಳಿ ಗ್ರಾಮದ ಮದುವೆಯೊಂದರಲ್ಲಿ ಊಟ ಮಾಡಿದ 25-30 ಜನರಿಗೆ ಮಧ್ಯರಾತ್ರಿ ವೇಳೆ ವಾಂತಿ, ಬೇಧಿ ಕಾಣಿಸಿಕೊಂಡಿದ್ದು, ಕೂಡಲೆ ಗ್ರಾಮದ ಸಮೀಪದ ಜಡೆ ಗ್ರಾಮದ ಪಿಎಚ್ಸಿಗೆ ಕೆಲವರನ್ನು, ಸೊರಬ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಕೆಲವರನ್ನ ಕರೆತಂದು ಚಿಕಿತ್ಸೆ ಕೊಡಿಸಲಾಗಿದೆ.
ಹೆಚ್ಚು ಅಸ್ವಸ್ಥರಾದ ಪುಟ್ಟಪ್ಪ ಎಂಬವರನ್ನು ಶಿಕಾರಿಪುರ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಸಾರ್ವಜನಿಕ ಆಸ್ಪತ್ರೆ ವೈದ್ಯ ಡಾ. ರಕ್ಷಿತ್, ಕಲುಷಿತ ನೀರಿನಿಂದ ವಾಂತಿಬೇಧಿ ಕಾಣಿಸಿಕೊಂಡಿದೆ, ಗ್ರಾಮದ ಕೊಳವೆ ಬಾವಿ, ತೆರೆದ ಬಾವಿ ಹಾಗೂ ಕೆರೆಯ ನೀರನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ, ನಿಯಂತ್ರಣಕ್ಕೆ ಹೆಚ್ಚಿನ ನಿಗಾ ವಹಿಸಲಾಗಿದೆ ಎಂದು ತಿಳಿಸಿದ್ದಾರೆ. ಸ್ಥಳಕ್ಕೆ ತಹಸೀಲ್ದಾರ್ ತೇಜಸ್ ಕುಮಾರ್, ಇಒ ಪುಷ್ಪಾ ಎಂ. ಕಮ್ಮಾರ್, ಡಾ. ನಾಗೇಂದ್ರಪ್ಪ, ಡಾ. ಶ್ರೀಕಾಂತ್ ತೆರಳಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement