ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸಿಬ್ಬಂದಿ ವರ್ಗಾವಣೆ: ಪರದಾಡಿದ ಬ್ಯಾಂಕ್ ಗ್ರಾಹಕರು

Lingaraj Badiger
Updated On : 15 May 2013, 10:54 am

ಕ.ಪ್ರ.ವಾರ್ತೆ, ಶಿರಾಳಕೊಪ್ಪ,  ಮೇ 14
ಶಿರಾಳಕೊಪ್ಪ ಸಿಂಡಿಕೇಟ್‌ಬ್ಯಾಂಕ್ ಶಾಖೆಯಲ್ಲಿ ಒಂದೇ ದಿನ ಬ್ಯಾಂಕ್ ಪ್ರಬಂದಕರು, ಸಹಾಯಕ ಪ್ರಬಂದಕರು ಹಾಗೂ ಆರ್‌ಎಓ ಅವರನ್ನು ವರ್ಗಮಾಡಿದ ಹಿನ್ನೆಲೆಯಲ್ಲಿ ಬ್ಯಾಂಕಿನಲ್ಲಿ ಗ್ರಾಹಕರು ತೀವ್ರ ಸಮಸ್ಯೆ ಅನುಭವಿಸುವಂತಾಯಿತು.
ಒಂದೇ ದಿನ ಜವಾಬ್ದಾರಿ ಸ್ಥಾನದಲ್ಲಿರುವ ಅಧಿಕಾರಿಗಳನ್ನು ತತ್‌ಕ್ಷಣ ವರ್ಗಾವಣೆ ಮಾಡಿರುವದಾಗಿ ಆದೇಶ ಕಳಿಸುವ ರೀಜನಲ್ ಕಚೇರಿಯವರಿಗೆ ತೊಂದರೆ ಆಗುತ್ತದೆ ಎಂಬ ಅರಿವಿಲ್ಲವೇ ಎಂದು ಗ್ರಾಹಕರು ಬ್ಯಾಂಕ್‌ನಲ್ಲಿ ಇದ್ದ ಬೆರಳೆಣೆಕೆಯ ಸಿಬ್ಬಂದಿಯನ್ನು ಪ್ರಶ್ನಿಸಿದರೆ ಅವರಲ್ಲಿ ಉತ್ತರ ಇಲ್ಲದಂತಾಗಿತ್ತು.
ಮಂಗಳವಾರ ಬ್ಯಾಂಕ್ ಪ್ರಾರಂಭವಾಗುತ್ತಿದ್ದಂತೆ ಸಿಬ್ಬಂದಿಗೆ ಸರ್ವರ್ ಕೋಡ್ ಗೊತ್ತಿಲ್ಲದ ಕಾರಣ ಗ್ರಾಹಕರು ಗಂಟೆಗಟ್ಟಲೇ ನಿಂತರು ಯಾವದೇ ಕೆಲಸವಾಗದಿದ್ದಾಗ ತೀವ್ರ ತರಾಟೆಗೆ ತೆಗೆದು ಕೊಂಡ ಪ್ರಸಂಗದಿಂದ ಸಿಬ್ಬಂದಿ ತಬ್ಬಿಬ್ಬಾದರು. ಕುಂಸಿ ಬ್ಯಾಂಕ್‌ನಿಂದ ಡೆಪಿಟೇಶನ್ ಮೇಲೆ ಬಂದ ಆಫೀಸರ್ ಸುರಜಿತ್ ಪಾಸ್‌ವರ್ಡ್ ಗೊತ್ತಿಲ್ಲ ವೆಂದು ಹೇಳುತ್ತಾ ಮ್ಯಾನೇಜರ್ ಕೊಠಡಿಯಲ್ಲಿ ಕುಳಿತ ಕಾರಣ ಕೌಂಟರ್‌ನಲ್ಲಿ ಉಂಟಾಗುವ ಸಮಸ್ಯೆಗಳಿಗೆ ಆಪೀಸರ್ ಬಳಿ ಪೆರೇಡ್ ಮಾಡಬೇಕಾಯಿತು.
ಎಟಿಎಂ ಬಂದ್: ಎಟಿಎಂಗೆ ಹಣ ಹಾಕಲು ಬ್ಯಾಂಕ್ ಆಫೀಸರ್ ಅವರಿಗೆ ಪಾಸ್‌ವರ್ಡ್ ಗೊತ್ತಿಲ್ಲದ ಕಾರಣ ಎಟಿಎಂನಲ್ಲಿ ಹಣ ವಿಲ್ಲದೇ ತೊಂದರೆ ಅನುಭವಿಸ ಬೇಕಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement