ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಹಾಲಿನ ಬೆಲೆ ಏರಿಕೆ ಪ್ರಶಂಸನೀಯ

Lingaraj Badiger
Updated On : 15 May 2013, 10:55 am

ಕ.ಪ್ರ.ವಾರ್ತೆ, ಶಿರಾಳಕೊಪ್ಪ,  ಮೇ 14
ರಾಜ್ಯದಲ್ಲಿ ಹಾಲು ಉತ್ಪಾದಕರು ಸಂಕಷ್ಟದಲ್ಲಿದ್ದು, ಹಾಲು ಉತ್ಪಾದನೆಯಿಂದ ವಿಮುಖರಾಗುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಅವರ ಸಂಕಷ್ಟಕ್ಕೆ ಸ್ಪಂದಿಸಿ ಪ್ರತಿ ಲೀ ನಾಲ್ಕುರು ಹೆಚ್ಚು ಮಾಡಿರುವದು ಸಂತಸ ತಂದಿದೆ ಎಂದು ಶಿವಮೊಗ್ಗ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಟಿ. ಶಿವಶಂಕರ್ ತಿಳಿಸಿದ್ದಾರೆ.
ಹೇಳಿಕೆ ನೀಡಿದ ಅವರು, ರಾಜ್ಯದ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ರೈತ ಪರ ನಿಲುವು ಕೈಗೊಂಡಿರುವದು ರೈತರಿಗೆ ಆರ್ಥಿಕ ಸಬಲತೆ ತಂದುಕೊಡುವ ದಿಕ್ಕಿನಲ್ಲಿ ಉತ್ತಮ ಹೆಜ್ಜೆ ಎಂದು ತಿಳಿಸಿದ್ದಾರೆ.
ಅದೇ ರೀತಿ ರಾಜ್ಯದ ಬಡವರಿಗೆ 1ರು. ನಂತೆ 30 ಕೇಜಿ ಅಕ್ಕಿಯನ್ನು ಪ್ರತಿತಿಂಗಳಿಗೆ ಕೊಡುವ ಯೋಜನೆ ಘೋಷಿಸಿರುವದು, ರಾಜ್ಯದ ಅಲ್ಪ ಸಂಖ್ಯಾತರಿಗೆ ಹಾಗೂ ಎಸ್‌ಸಿ, ಎಸ್‌ಟಿ ಜನಾಂಗದ ಎಲ್ಲ ಸಾಲ ಮನ್ನಾ ಮಾಡಿರುವದು ಕಾಂಗ್ರೆಸ್‌ಗೆ ಹಿಂದುಳಿದವರ ಹಾಗೂ ಅಲ್ಪಸಂಖ್ಯಾತರ ಬಗ್ಗೆ ಇರುವ ಕಾಳಜಿ ತೋರಿಸುತ್ತದೆ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement