19ರಂದು ಡಾ. ಶಂಭಾ ಜೋಷಿ ಸಂಶೋಧನಾ ಪ್ರಶಸ್ತಿ ಪ್ರದಾನ
ಸಾಗರ: ಶಿವಮೊಗ್ಗ ಕರ್ನಾಟಕ ಸಂಘದಿಂದ 19ರಂದು ಸಂಜೆ 4-30ಕ್ಕೆ ಹೆಗ್ಗೋಡಿನ ಕಿನ್ನರಮೇಳ ಸಭಾಂಗಣದಲ್ಲಿ ನಾಡಿನ ಪ್ರಸಿದ್ಧ ಭಾಷಾ ಸಂಶೋಧಕ ಡಾ.ಡಿ.ಎನ್. ಶಂಕರ್ ಭಟ್ ಅವರಿಗೆ ಡಾ. ಶಂಭಾ ಜೋಷಿ ಸಂಶೋಧನಾ ಪ್ರಶಸ್ತಿ ನೀಡಿ ಪುರಸ್ಕರಿಸಲಾಗುವುದು.
ಕರ್ನಾಟಕ ಸಂಘದ ಅಧ್ಯಕ್ಷ ಎಸ್.ವಿ.ತಿಮ್ಮಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಪ್ರಶಸ್ತಿ ಪುರಸ್ಕೃತರ ಕುರಿತು ಶಿವಮೊಗ್ಗ ಡಿವಿಎಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕ ಡಾ.ಎಚ್.ಟಿ. ಕೃಷ್ಣಮೂರ್ತಿ ಅಭಿನಂದನಾ ಭಾಷಣ ಮಾಡಲಿದ್ದಾರೆ. ಸಂಘದ ಪೂರ್ವಾಧ್ಯಕ್ಷೆ ವಿಜಯ ಶ್ರೀಧರ್ ಪ್ರಸ್ತಾವನೆ ಮಾಡಲಿದ್ದು ಸಭಾ ಕಾರ್ಯಕ್ರಮದ ನಂತರ ಪಂಡಿತ್ ಸತೀಶ್ ಭಟ್ ಮತ್ತು ತಂಡದವರಿಗೆ ಹಿಂದೂಸ್ತಾನಿ ಗಾಯನ ನಡೆಯಲಿದೆ.