23ರಂದು ನಿರ್ಮಲಾನಂದ ಶ್ರೀಗಳ ಪುರಪ್ರವೇಶ
ಭದ್ರಾವತಿ: ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ 72ನೇ ಪೀಠಾಧಿಪತಿಗಳಾದ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಗಳು ಮೇ 23ರಂದು ಗುರುವಾರ ಬೆಳಗ್ಗೆ ಪುರಪ್ರವೇಶ ಮಾಡಲಿದ್ದಾರೆ.
ತತ್ಸಬಂಧವಾಗಿ ಗುರುವಂದನಾ ಕಾರ್ಯಕ್ರಮವನ್ನು ಆದಿಚುಂಚನಗಿರಿ ಶಿವಮೊಗ್ಗ ಶಾಖಾಮಠದ ಶ್ರೀ ಪ್ರಸನ್ನನಾಥ ಸ್ವಾಮಿಗಳ ನೇತೃತ್ವದಲ್ಲಿ ಬೆಳಗ್ಗೆ 8.30ಕ್ಕೆ ಕಾರೇಹಳ್ಳಿಯಲ್ಲಿರುವ ನೂತನ ಬಿಜಿಎಸ್ ಶಾಲಾ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಭದ್ರಾವತಿ ತಾಲ್ಲೂಕು ಒಕ್ಕಲಿಕರ ಸಂಘದ ಪ್ರಕಟಣೆ ತಿಳಿಸಿದೆ.
ಆಧ್ಯಾತ್ಮಿಕ ಬಂಧುಗಳು ಜಾತ್ಯತೀತವಾಗಿ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ತಾಲೂಕು ಒಕ್ಕಲಿಗರ ಸಂಘ ಕೋರಿದೆ.
ಗುರುವಂದನಾ ಕಾರ್ಯಕ್ರಮ ಮತ್ತು ಪಾದಪೂಜೆಯ ನಂತರ ಶ್ರೀಗಳನ್ನು ಭವ್ಯಾಲಂಕೃತ ವಾಹನದಲ್ಲಿ ಕರೆತಂದು ಶಿವಮೊಗ್ಗ ನಗರಕ್ಕೆ ಬೀಳ್ಕೊಡಲಾಗುವುದು. ಪೂಜ್ಯರ ಪಾದಪೂಜೆ ಮಾಡಲಚ್ಛಿಸುವವರು 20ರೊಳಗೆ ಸಂಘದ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.