ಅರ್ಜಿ ಆಹ್ವಾನ
ಶಿವಮೊಗ್ಗ: ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ನಡೆಸುತ್ತಿರುವ ಮೆಟ್ರಿಕ್ ಪೂರ್ವ ಅಥವಾ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿಲಯಗಳಿಗೆ 2013-14ನೇ ಶೈಕ್ಷಣಿಕ ಸಾಲಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಪ್ರವೇಶ ಬಯಸುವ ವಿದ್ಯಾರ್ಥಿಗಳು ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿ, ಶಿವಮೊಗ್ಗ ಅಥವಾ ಸಂಬಂಧಪಟ್ಟ ವಿದ್ಯಾರ್ಥಿನಿಲಯಗಳಲ್ಲಿ ಅರ್ಜಿ ಪಡೆದು ಜೂನ್ 6ರ ಸಂಜೆ 5ಗಂಟೆಯೊಳಗೆ ಸಲ್ಲಿಸಬಹುದು. ವಿವರಗಳಿಗಾಗಿ-08182- 273512.
ಪಡಿತರ ಚೀಟಿದಾರರ ಗಮನಕ್ಕೆ
ಶಿವಮೊಗ್ಗ: ಭದ್ರಾವತಿ ಪಡಿತರ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಪಡಿತರ ಚೀಟಿದಾರರು 2010ಕ್ಕೂ ಹಿಂದೆ ಖಾಸಗಿ ಸಂಸ್ಥೆಯವರು ನೀಡಿದ ಖಾಯಂ ಪಡಿತರ ಚೀಟಿಗಳಲ್ಲಿರುವ ಬೆರಳಚ್ಚು ಬಯೋವುಟ್ರಿಕ್ ದೋಷಪುರಿತವಾಗಿದ್ದು, ಈ ಸಂಬಂಧ ಇಲಾಖೆಯ ವೆಬ್‌ಸೈಟ್‌ನಲ್ಲಿ ಬಯೋವುಟ್ರಿಕ್ ಪಡೆಯಲು ತಮ್ಮ ಹಾಗೂ ಕುಟುಂಬ ಸದಸ್ಯರ ಅಥವಾ ಸ್ನೇಹಿತರ ಮೊಬೈಲ್‌ನಿಂದ 9212357123ಕ್ಕೆ ರೇಷನ್ ಕಾರ್ಡ್ ಸಂಖ್ಯೆ ನಮೂದಿಸಿ ಎಸ್‌ಎಂಎಸ್ ಮೂಲಕ ಕಳುಹಿಸಿಬೇಕು. ನಂತರ ಎಸ್‌ಎಂಎಸ್ ಮೂಲಕ ಬರುವ ಟೋಕನ್ ನಂಬರ್ ಮತ್ತು ಸೆಕ್ಯುರಿಟಿ ಕೋಡ್ ಸಂಖ್ಯೆ ಪಡೆದು, ಪಡಿತರ ಅಂಗಡಿಗೆ ತೋರಿಸಿದಲ್ಲಿ ಮಾತ್ರ ಮೇ ತಿಂಗಳ ಪಡಿತರ ಮತ್ತು ಸೀಮೆಎಣ್ಣೆ ಪಡೆಯಬಹುದು ಎಂದು ಭದ್ರಾವತಿಯ ಅನೌಪಚಾರಿಕ ಪಡಿತರ ಪ್ರದೇಶದ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.