ಚೀಟಿದಾರರಿಗೆ ಆಹಾರ ಧಾನ್ಯ, ಸೀಮೆಎಣ್ಣೆ ಬಿಡುಗಡೆ
ಶಿವಮೊಗ್ಗ: ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮೇ ತಿಂಗಳ ಜಿಲ್ಲೆಯ ಎಲ್ಲಾ ಪಡಿತರ ಚೀಟಿದಾರರಿಗೆ ಆಹಾರ ಧಾನ್ಯ ಮತ್ತು ಸೀಮೆಎಣ್ಣೆ ಬಿಡುಗಡೆ ಮಾಡಿದೆ. ಅಕ್ಷಯ ಹಾಗೂ ನೆಮ್ಮದಿ ಕೇಂದ್ರಗಳ ಮೂಲಕ ವಿತರಿಸಲಾದ ತಾತ್ಕಾಲಿಕ ಪಡಿತರ ಚೀಟಿ ಪಡೆದ, ಭಾವಚಿತ್ರ ತೆಗೆಸಿಕೊಂಡ ಬಿಪಿಎಲ್ ಕಾರ್ಡ್ದಾರರಿಗೆ ರು. 3ರ ದರದಲ್ಲಿ ಒಂದು ಯೂನಿಟ್ಗೆ 4 ಕೆ.ಜಿ ಅಕ್ಕಿ, 1ಕೆ.ಜಿ ಗೋಧಿ, 2 ಯೂನಿಟ್ಗೆ 8 ಕೆ.ಜಿ ಅಕ್ಕಿ, 2ಕೆ.ಜಿ ಗೋಧಿ, 3 ಯೂನಿಟ್ಗೆ 12 ಕೆ.ಜಿ ಅಕ್ಕಿ, 3ಕೆ.ಜಿ ಗೋಧಿ, 4 ಯೂನಿಟ್ಗೆ 16 ಕೆ.ಜಿ ಅಕ್ಕಿ, 3ಕೆ.ಜಿ ಗೋಧಿ, 5 ಯೂನಿಟ್ ಮತ್ತು ಮೇಲ್ಪಟ್ಟು ಸದಸ್ಯರನ್ನು ಹೊಂದಿದವರಿಗೆ 20 ಕೆ.ಜಿ ಅಕ್ಕಿ ಮತ್ತು 3 ಕೆ.ಜಿ ಗೋಧಿ ಹಾಗೂ ಅಂತ್ಯೋದಯ ಪಡಿತರ ಚೀಟಿದಾರರಿಗೆ ರು. 3ರಂತೆ 29 ಕೆ.ಜಿ. ಅಕ್ಕಿ ಮತ್ತು ರು. 2 ಕ್ಕೆ 6 ಕೆ.ಜಿ. ಗೋಧಿ, ರು. 13.50ಕ್ಕೆ 1 ಕೆ.ಜಿ ಸಕ್ಕರೆಯನ್ನು ಎಪಿಎಲ್ ಪಡಿತರ ಚೀಟಿ ಒಂದಕ್ಕೆ ರು. 10ಕ್ಕೆ 6 ಕೆ.ಜಿ ಅಕ್ಕಿಯನ್ನು, ರು. 8 ಕ್ಕೆ 3 ಕೆ.ಜಿ ಗೋಧಿ ವಿತರಿಸಲಾಗುವುದು. ಅಡುಗೆ ಅನಿಲ ಸಂಪರ್ಕ ರಹಿತ ಶಿವಮೊಗ್ಗ ಮತ್ತು ಭದ್ರಾವತಿಯ ಪಡಿತರದಾರರಿಗೆ 6ಲೀ, ಪಟ್ಟಣ ಪ್ರದೇಶದವರಿಗೆ 5ಲೀ ಮತ್ತು ಗ್ರಾಮಾಂತರ ಪ್ರದೇಶದವರಿಗೆ 3ಲೀ ನಂತೆ ಸೀಮೆಎಣ್ಣೆ ವಿತರಿಸಲಾಗುತ್ತಿದ್ದು, ಶಿವಮೊಗ್ಗ ರು. 16.70, ಭದ್ರಾವತಿ ರು. 12.80, ಸಾಗರ ರು. 16.60, ಶಿಕಾರಿಪುರ ಮತ್ತು ಶಿರಾಳಕೊಪ್ಪದಲ್ಲಿ ರು. 16.70, ತೀರ್ಥಹಳ್ಳಿ ಮತ್ತು ಹೊಸನಗರ ಪಟ್ಟಣದಲ್ಲಿ ರು. 16.40 ಹಾಗೂ ಸೊರಬ ಪಟ್ಟಣದಲ್ಲಿ ರು. 16.70 ಮತ್ತು ಗ್ರಾಮಾಂತರ ಪ್ರದೇಶ ಶಿವಮೊಗ್ಗ, ಶಿಕಾರಿಪುರ ಹಾಗೂ ಸೊರಬ ರು. 17.20.
ಭದ್ರಾವತಿ ರು. 17.30, ಸಾಗರ ರು. 17.10, ತೀರ್ಥಹಳ್ಳಿ ರು. 16.90 ಮತ್ತು ಹೊಸನಗರ ರು. 16.90ಕ್ಕೆ ಸೀಮೆಎಣ್ಣೆಯನ್ನು ಎಲ್ಲಾ ಪಡಿತರ ಚೀಟಿದಾರರಿಗೆ ವಿತರಿಸಲಾಗುವುದು. ಒಂದು ವೇಳೆ ಪಡಿತರ ವಿತರಣೆಯಲ್ಲಿ ಯಾವುದಾದರೂ ಲೋಪದೋಷಗಳಿದ್ದಲ್ಲಿ ಈ ಕೆಳಕಂಡ ಸಹಾಯವಾಣಿಗೆ ದೂರು ಸಲ್ಲಿಸಬಹುದಾಗಿದೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರು ಶಿವಮೊಗ್ಗ (08182-222203),
ಅನೌಪಚಾರಿಕ ಪಡಿತರ ಪ್ರದೇಶ ಸಹಾಯಕ ನಿರ್ದೇಶಕರು ಶಿವಮೊಗ್ಗ (08182-250110), 3. ಅನೌಪಚಾರಿಕ ಪಡಿತರ ಪ್ರದೇಶ ಸಹಾಯಕ ನಿರ್ದೇಶಕರು ಭದ್ರಾವತಿ (08282- 263444).
4. ತಹಶೀಲ್ದಾರ್ ಕಚೇರಿ ಆಹಾರ ವಿಭಾಗ ಶಿವಮೊಗ್ಗ (08182-277045), ತಹಸೀಲ್ದಾರ್ ಕಚೇರಿ ಆಹಾರ ವಿಭಾಗ ಭದ್ರಾವತಿ (08282 265144), ತಹಸೀಲ್ದಾರ್ ಕಚೇರಿ ಆಹಾರ ವಿಭಾಗ ಸಾಗರ (08183-220031).
ತಹಸೀಲ್ದಾರ್ ಕಚೇರಿ ಆಹಾರ ವಿಭಾಗ ಶಿಕಾರಿಪುರ (08187-222058), ತಹಸೀಲ್ದಾರ್ ಕಚೇರಿ ಆಹಾರ ವಿಭಾಗ ತೀರ್ಥಹಳ್ಳಿ (08181-220160), ತಹಸೀಲ್ದಾರ್ ಕಚೇರಿ ಆಹಾರ ವಿಭಾಗ ಸೊರಬ (08184-272466), ತಹಸೀಲ್ದಾರ್ ಕಚೇರಿ ಆಹಾರ ವಿಭಾಗ ಹೊಸನಗರ (08185-221115) ಸಂಪರ್ಕಿಸಬಹುದು.
ಪಡಿತರ ಚೀಟಿದಾರರ ಗಮನಕ್ಕೆ
ಶಿವಮೊಗ್ಗ: ನಗರ ವ್ಯಾಪ್ತಿಯಲ್ಲಿ ಬರುವ ಪಡಿತರ ಚೀಟಿದಾರರಿಗೆ 2010ಕ್ಕೂ ಹಿಂದೆ ಖಾಸಗಿ ಸಂಸ್ಥೆಯವರು ನೀಡಿದ ಖಾಯಂ ಪಡಿತರ ಚೀಟಿಗಳಲ್ಲಿರುವ ಬೆರಳಚ್ಚು ಬಯೋವುಟ್ರಿಕ್ ದೋಷಪೂರಿತವಾಗಿದ್ದು, ಈ ಹಿನ್ನೆಲೆಯಲ್ಲಿ ಇಲಾಖೆಯ ವೆಬ್ಸೈಟ್ನಲ್ಲಿ ಬಯೋವುಟ್ರಿಕ್ ಪಡೆಯಲು ತಮ್ಮ ಕುಟುಂಬ ಸದಸ್ಯರು ಅಥವಾ ಸ್ನೇಹಿತರ ಮೊಬೈಲಿನಿಂದ 9212357123 ಕ್ಕೆ ರೇಷನ್ ಕಾರ್ಡ್ ಸಂಖ್ಯೆ ನಮೂದಿಸಿ ಎಸ್ಎಂಎಸ್ ಕಳುಹಿಸಬೇಕು. ನಂತರ ಎಸ್ಎಂಎಸ್ ಮೂಲಕ ಬರುವ ಟೋಕನ್ ನಂಬರ್ ಮತ್ತು ಸೆಕ್ಯುರಿಟಿ ಕೋಡ್ ಪಡೆದುಕೊಂಡು, ಪಡಿತರ ಪಡೆಯುವ ಅಂಗಡಿಗೆ ತೋರಿಸಿದಲ್ಲಿ ಮಾತ್ರ ಮೇ ತಿಂಗಳ ಪಡಿತರ ಮತ್ತು ಸೀಮೆಎಣ್ಣೆ ಪಡೆಯಬಹುದು. ಅಂತಹ ಪಡಿತರ ಚೀಟಿಗಳನ್ನು ಹೊಂದಿರುವವರು ನಗರ ಪ್ರದೇಶಗಳಲ್ಲಿ ಕುಟುಂಬ ಸದಸ್ಯರ ಫೋಟೋ ಮತ್ತು ಬಯೋವುಟ್ರಿಕ್ಗಳನ್ನು ಸನಿಹದ ಫೋಟೋ ಬಯೋ ಸೇವಾ ಕೇಂದ್ರಕ್ಕೆ ನೀಡಬೇಕು. ತಪ್ಪಿದಲ್ಲಿ ಅಂತಹ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗುವುದು ಎಂದು ಅನೌಪಚಾರಿಕ ಪಡಿತರ ಪ್ರದೇಶದ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.