ಪಡಿತರ ಚೀಟಿದಾರರ ಗಮನಕ್ಕೆ
ಶಿವಮೊಗ್ಗ: ನಗರ ವ್ಯಾಪ್ತಿಯಲ್ಲಿ ಬರುವ ಪಡಿತರ ಚೀಟಿದಾರರಿಗೆ 2010ಕ್ಕೂ ಹಿಂದೆ ಖಾಸಗಿ ಸಂಸ್ಥೆಯವರು ನೀಡಿದ ಖಾಯಂ ಪಡಿತರ ಚೀಟಿಗಳಲ್ಲಿರುವ ಬೆರಳಚ್ಚು ಬಯೋವುಟ್ರಿಕ್ ದೋಷಪೂರಿತವಾಗಿದ್ದು, ಈ ಹಿನ್ನೆಲೆಯಲ್ಲಿ ಇಲಾಖೆಯ ವೆಬ್ಸೈಟ್ನಲ್ಲಿ ಬಯೋವುಟ್ರಿಕ್ ಪಡೆಯಲು ತಮ್ಮ ಕುಟುಂಬ ಸದಸ್ಯರು ಅಥವಾ ಸ್ನೇಹಿತರ ಮೊಬೈಲಿನಿಂದ 9212357123 ಕ್ಕೆ ರೇಷನ್ ಕಾರ್ಡ್ ಸಂಖ್ಯೆ ನಮೂದಿಸಿ ಎಸ್ಎಂಎಸ್ ಕಳುಹಿಸಬೇಕು. ನಂತರ ಎಸ್ಎಂಎಸ್ ಮೂಲಕ ಬರುವ ಟೋಕನ್ ನಂಬರ್ ಮತ್ತು ಸೆಕ್ಯುರಿಟಿ ಕೋಡ್ ಪಡೆದುಕೊಂಡು, ಪಡಿತರ ಪಡೆಯುವ ಅಂಗಡಿಗೆ ತೋರಿಸಿದಲ್ಲಿ ಮಾತ್ರ ಮೇ ತಿಂಗಳ ಪಡಿತರ ಮತ್ತು ಸೀಮೆಎಣ್ಣೆ ಪಡೆಯಬಹುದು.
ಅಂತಹ ಪಡಿತರ ಚೀಟಿಗಳನ್ನು ಹೊಂದಿರುವವರು ನಗರ ಪ್ರದೇಶಗಳಲ್ಲಿ ಕುಟುಂಬ ಸದಸ್ಯರ ಫೋಟೋ ಮತ್ತು ಬಯೋವುಟ್ರಿಕ್ಗಳನ್ನು ಸನಿಹದ ಫೋಟೋ ಬಯೋ ಸೇವಾ ಕೇಂದ್ರಕ್ಕೆ ನೀಡಬೇಕು ಎಂದಿದ್ದಾರೆ.