ಪಡಿತರ ಬಿಡುಗಡೆ
ಶಿವಮೊಗ್ಗ: ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮೇ ತಿಂಗಳ ಜಿಲ್ಲೆಯ ಎಲ್ಲಾ ಪಡಿತರ ಚೀಟಿದಾರರಿಗೆ ಆಹಾರ ಧಾನ್ಯ ಮತ್ತು ಸೀಮೆಎಣ್ಣೆ ಬಿಡುಗಡೆ ಮಾಡಿದೆ.
ಅಕ್ಷಯ ಹಾಗೂ ನೆಮ್ಮದಿ ಕೇಂದ್ರಗಳ ಮೂಲಕ ವಿತರಿಸಲಾದ ತಾತ್ಕಾಲಿಕ ಪಡಿತರ ಚೀಟಿ ಪಡೆದ, ಭಾವಚಿತ್ರ ತೆಗೆಸಿಕೊಂಡ ಬಿಪಿಎಲ್ ಕಾರ್ಡ್ದಾರರಿಗೆ ರು. 3ರ ದರದಲ್ಲಿ ಒಂದು ಯೂನಿಟ್ಗೆ 4 ಕೆ.ಜಿ ಅಕ್ಕಿ, 1ಕೆ.ಜಿ ಗೋಧಿ, 2 ಯೂನಿಟ್ಗೆ 8 ಕೆ.ಜಿ ಅಕ್ಕಿ, 2ಕೆ.ಜಿ ಗೋಧಿ, 3 ಯೂನಿಟ್ಗೆ 12 ಕೆ.ಜಿ ಅಕ್ಕಿ, 3ಕೆ.ಜಿ ಗೋಧಿ, 4 ಯೂನಿಟ್ಗೆ 16 ಕೆ.ಜಿ ಅಕ್ಕಿ, 3ಕೆ.ಜಿ ಗೋಧಿ, 5 ಯೂನಿಟ್ ಮತ್ತು
ಮೇಲ್ಪಟ್ಟು ಸದಸ್ಯರನ್ನು ಹೊಂದಿದವರಿಗೆ 20 ಕೆ.ಜಿ ಅಕ್ಕಿ ಮತ್ತು 3 ಕೆ.ಜಿ ಗೋಧಿ ಹಾಗೂ ಅಂತ್ಯೋದಯ ಪಡಿತರ ಚೀಟಿದಾರರಿಗೆ ರು. 3ರಂತೆ 29 ಕೆ.ಜಿ. ಅಕ್ಕಿ ಮತ್ತು ರು. 2 ಕ್ಕೆ 6 ಕೆ.ಜಿ. ಗೋಧಿ, ರು. 13.50ಕ್ಕೆ 1 ಕೆ.ಜಿ ಸಕ್ಕರೆ ಬಿಡುಗಡೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.