ಬಸವ ಜಯಂತಿ: ರಕ್ತದಾನ ಶಿಬಿರ
ಶಿವಮೊಗ್ಗ: ಬಸವೇಶ್ವರ ಜಯಂತೋತ್ಸವ ಅಂಗವಾಗಿ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘ, ಸ್ವಯಂ ಪ್ರೇರಿತ ರಕ್ತದಾನಿಗಳ ಸೇವಾ ಸಂಸ್ಥೆ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಆಶ್ರಯದಲ್ಲಿ ಗಾಂಧಿಬಜಾರಿನ ಬಸವೇಶ್ವರ ದೇವಸ್ಥಾನದಲ್ಲಿ ಸಮಾಜದ ಬಾಂಧವರಿಗೆ ಹಾಗೂ ಸಾರ್ವಜನಿಕರಿಗಾಗಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಬಸವೇಶ್ವರ ವೀರಶೈವ ಸಮಾಜದ ಉಪಾಧ್ಯಕ ಪಿ. ಆನಂದವಾಲಿ ಶಿಬಿರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ನೂರಾರು ಜನ ರಕ್ತದಾನ ಮಾಡಿದರು. ಸಮಾಜದ ಪ್ರಮುಖ ತಾರಾನಾಥ್, ಸಂಜಯ್ ಕುಮಾರ್, ಎಚ್.ವಿ. ಮಹೇಶ್ವರಪ್ಪ, ಪಂಚಾಕ್ಷರಿ, ರತ್ನಮ್ಮ ಮಂಜುನಾಥ್, ಶಾಂತ ಆನಂದ್, ಮೋಹನ್, ಲೋಕೇಶ್ವರಿ ಚೋಳ್ಕೆ, ರೋಟರಿ ವಿದ್ಯಾಸಂಸ್ಥೆಯ ಅಧ್ಯಕ್ಷ ಜಿ. ವಿಜಯಕುಮಾರ್, ಧರಣೇಂದ್ರ ದಿನಕರ್ ಮತ್ತಿತರರು ಇದ್ದರು.