ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮಕ್ಕಳಿಗೆ ಸಾಹಸ ಪ್ರಜ್ಞೆ ಅಗತ್ಯ

Lingaraj Badiger
Updated On : 16 May 2013, 10:56 am

ಶಿವಮೊಗ್ಗ: ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ಸಾಹಸ ಪ್ರಜ್ಞೆ ಮೂಡಿಸುವುದು ಪ್ರೋತ್ಸಾಹಿಸುವುದು ಪೋಷಕರ ಕರ್ತವ್ಯ ಎಂದು ಯೂತ್ ಹಾಸ್ಟೆಲ್ ಅಸೋಸಿಯೇಷನ್‌ನ ಆಫ್ ಇಂಡಿಯಾದ ರಾಜ್ಯ ಘಟಕದ ನಿರ್ದೇಶಕ ಜಿ. ವಿಜಯಕುಮಾರ್ ಹೇಳಿದರು. ನಗರದ ಯೂತ್ ಹಾಸ್ಟೆಲ್ ಹಾಗೂ ತರುಣೋಧಯ ಘಟಕ ಆಶ್ರಯದಲ್ಲಿ ಯೂತ್ ಹಾಸ್ಟೆಲ್‌ನ 16 ವಿದ್ಯಾರ್ಥಿಗಳಿಗೆ ಹಿಮಾಲಯದ ಅತ್ಯಂತ ಸುಂದರ ಹಾಗೂ ಕಷ್ಟಕರವಾದ ಸರ್‌ಕ್ಕುಂಡಿ ಪಾಸ್‌ಗೆ 11 ದಿನದ ಚಾರಣಕ್ಕೆ ಬೀಳ್ಕೊಡುಗೆ ನೀಡಿ ಮಾತನಾಡಿದ ಅವರು, ಇಂದಿನ ಆಧುನಿಕ ಯುಗದಲ್ಲಿ ಮಕ್ಕಳು ಕಂಪ್ಯೂಟರ್ ಹಾಗೂ ಮೊಬೈಲ್‌ಗಳಿಗೆ ಮಾರುಹೋಗಿ ತಮ್ಮ ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ರಾಜ್ಯದ ಮಕ್ಕಳೊಂದಿಗೆ ಸಂಪರ್ಕ ಹೊಂದುವುದರಿಂದ ಮಾನಸಿಕವಾಗಿ ಸದೃಢರಾಗುತ್ತಾರೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement