ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಶೇಷಾಚಲ ಶೆಟ್ಟಿ ಕ್ರಿಕೆಟ್ ಅಕಾಡೆಮಿಗೆ ಚಾಲನೆ

Lingaraj Badiger
Updated On : 16 May 2013, 11:03 am

ಕ.ಪ್ರ.ವಾರ್ತೆ, ಶಿವಮೊಗ್ಗ, ಮೇ 15
ಬಹು ನಿರೀಕ್ಷಿತ ಎಂ.ವಿ. ಶೇಷಾಚಲ ಶೆಟ್ಟಿ ಕ್ರಿಕೆಟ್ ಅಕಾಡೆಮಿಯು ಬುಧವಾರ ನಗರದ ಜೆಎನ್‌ಎನ್‌ಸಿಇ ಕಾಲೇಜು ಆವರಣದಲ್ಲಿ ಬುಧವಾರ ಲೋಕಾರ್ಪಣೆಗೊಂಡಿದೆ. ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ವಿ. ತಿಮ್ಮಯ್ಯ ಅಕಾಡೆಮಿ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಕ್ರೀಡೆಯಲ್ಲಿ ಕುತೂಹಲಕಾರಿ ಸಂಗತಿಗಳು ಹೆಚ್ಚಾಗಿದ್ದು, ಪ್ರತಿ ಕ್ರೀಡೆಗೂ ಅದರದ್ದೆ ಆದ ಮಹತ್ವ ಇರುತ್ತದೆ ಎಂದರು.
ಪ್ರೇರಕ ಶಕ್ತಿ: ಎಂ.ವಿ. ಶೇಷಾಚಲ ಶೆಟ್ಟಿ ಅವರು ಓರ್ವ ಉತ್ತಮ ಕ್ರಿಕೆಟ್ ಪಟು. ಅದರೊಂದಿಗೆ ಎನ್‌ಸಿಸಿ ಮತ್ತಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಮೂಲಕ ಯವಕರಿಗೆ ಪ್ರೇರಕ ಶಕ್ತಿಯಾಗಿದ್ದರು. ಅವರ ಹೆಸರಿನಲ್ಲಿ ಕ್ರಿಕೆಟ್ ಅಕಾಡೆಮಿ ಅಸ್ಥಿತತ್ವಕ್ಕೆ ಬಂದಿರುವುದು ಶ್ಘಾಘನೀಯ ಎಂದ ಅವರು, ಶೇಷಾಚಲ ಅವರು ಹೆಸರು ಜನಮಾನಸದಲ್ಲಿ ಉಳಿಯಲು ಡಿ.ಎಸ್. ಅರುಣ್ ಮತ್ತು ತಂಡ ಹಮ್ಮಿಕೊಂಡಿರುವ ಕಾರ್ಯ ಯಶಸ್ವಿಯಾಗಲಿ ಎಂದು ಹಾರೈಸಿದರು.
ಶಿಸ್ತಿನ ತಾಯಿ ಕ್ರೀಡೆ: ಜೀವನದಲ್ಲಿ ಶಿಸ್ತು, ಸಂಯಮ ಮಾನಸಿಕ ಸ್ಥಿರತೆ ಬರಲು ಕ್ರೀಡೆ ಮುಖ್ಯ ಪಾತ್ರವಹಿಸುತ್ತದೆ. ಆದರಿಂದ ಶಿಸ್ತಿನ ತಾಯಿ ಕ್ರೀಡೆ ಎಂದರೆ ತಪ್ಪಾಗುವುದಿಲ್ಲ ಎಂದರಲ್ಲದೇ, ಇಂದಿನ ಕ್ರಿಕೆಟ್ ಜಂಟ್ಲ್‌ಮನ್‌ಗಳ ಆಟವಾಗಿ ಉಳಿದಿಲ್ಲ. ಬದಲಿಗೆ ಮದ್ಯ ಮಾರಾಟಗಾರರ ತಾಣವಾಗಿ ಮಾರ್ಪಟ್ಟಿದ್ದು, ಉದ್ದಿಮೆಯಾಗಿ, ಜೂಜುಕೋರರ ಆಟವಾಗಿ ಪರಿವರ್ತಿತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮ್ಯಾಚ್ ಫಿಕ್ಸಿಂಗ್: ಕೇವಲ ಕ್ರಿಕೆಟ್‌ನಲ್ಲಿ ಮಾತ್ರ ಮ್ಯಾಚ್ ಫಿಕ್ಸಿಂಗ್ ನಡೆಯುತ್ತಿಲ್ಲ. ರಾಜಕಾರಣ ಸೇರಿದಂತೆ ಮತ್ತಿತರ ಕ್ಷೇತ್ರಗಳಲ್ಲಿಯೂ ಮ್ಯಾಚ್ ಫಿಕ್ಸಿಂಗ್ ನಡೆಯುತ್ತಿದೆ. ಅದು ಕಳೆದ ಕೆಲ ದಿನಗಳ ಹಿಂದೆ ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶದಿಂದ ಸಾಬೀತಾಗಿದೆ ಎಂದರು.
ತರಬೇತಿಗೆ ಅವಕಾಶ: ಅಕಾಡೆಮಿಯ ಅಧ್ಯಕ್ಷ ಡಿ.ಎಸ್. ಅರುಣ್, ಈ ಅಕಾಡೆಮಿ ಆಸಕ್ತರಿಗೆ ವರ್ಷಪೂರ್ತಿ ಕ್ರಿಕೆಟ್ ತರಬೇತಿ ನೀಡಲಿದ್ದು, ಶಾಲಾ- ಕಾಲೇಜು ಮಕ್ಕಳಿಗೆ ಅನುಕೂಲವಾಗಲೆಂದು ವಾರಕ್ಕೆ 3 ದಿನದ ಹಾಗೂ ವಾರಕ್ಕೆ 4 ದಿನಗಳು ತರಬೇತಿಗೆ ಅವಕಾಶವಿದೆ ಎಂದರು.
ಶೇಷಾಚಲ ಶೆಟ್ಟಿ ತಮ್ಮ ವೃತ್ತಿಜೀವನದಲ್ಲಿ ನೂರಾರು ಕ್ರೀಡಾ ಪ್ರತಿಭೆಗಳನ್ನು ಬೆಳೆಸಿದ್ದಾರೆ. ಕುವೆಂಪು ವಿವಿಯ ದೈಹಿಕ ಶಿಕ್ಷಣ ನಿರ್ದೇಶಕರಾಗಿ ದುಡಿದಿದ್ದಾರೆ. ಕೆಸಿಎ ವಿಭಾಗಧಿಕಾರಿಗಳಾಗಿದ್ದ ಅವಧಿಯಲ್ಲಿ ಶಿವಮೊಗ್ಗದ ನವುಲೆಯಲ್ಲಿ ನಿರ್ಮಾಣವಾಗುತ್ತಿರುವ ಕ್ರಿಕೆಟ್ ಕ್ರೀಡಾಂಗಣ ಸ್ಥಾಪನೆಯಾಗಲು ರೂವಾರಿಗಳಾಗಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ದಿ. ಎಂ.ವಿ. ಶೇಷಾಚಲ ಶೆಟ್ಟಿ ಅವರ ಪುತ್ರಿ ಪ್ರತಿಭಾ, ಎನ್‌ಇಎಸ್ ಖಜಾಂಚಿ  ಅಶ್ವತ್ಥನಾರಾಯಣ ಶೆಟ್ಟಿ, ದುರ್ಗಿಗುಡಿ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಪುಟ್ಟಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement