ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

'ಸಾಹಿತ್ಯ ಸಮ್ಮೇಳನ ಯಾಂತ್ರಿಕವಾಗಬಾರದು'

Lingaraj Badiger
Updated On : 16 May 2013, 10:56 am

ಕ.ಪ್ರ.ವಾರ್ತೆ, ಸಾಗರ,  ಮೇ 15
ಸಾಹಿತ್ಯ ಸಮ್ಮೇಳನಗಳು ಯಾಂತ್ರಿಕವಾಗಬಾರದು. ಸರ್ಕಾರಿ ನೌಕರರು, ಮಹಿಳೆಯರು, ಮಕ್ಕಳು, ರೈತರು, ಸಾರ್ವಜನಿಕರು ಪಾಲ್ಗೊಳ್ಳುವ ಮೂಲಕ ಸಮ್ಮೇಳನದ ಯಶಸ್ಸಿಗೆ ಸಹಕಾರ ನೀಡಬೇಕು ಎಂದು ಉಪವಿಭಾಗಾಧಿಕಾರಿ ಹಾಗೂ ತಾಲೂಕು ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ  ಡಾ. ಉದಯ ಕುಮಾರ ಶೆಟ್ಟಿ ಹೇಳಿದರು.
ತಾಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸಾಹಿತ್ಯ ಪರಿಷತ್ತು ವತಿಯಿಂದ ಬುಧವಾರ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ, ನಾಡುನುಡಿಯ ಸಾಂಸ್ಕೃತಿಯ ಸಾಹಿತ್ಯಿಕ ವೈಭವವನ್ನು ಪ್ರತಿಬಿಂಬಿಸುವ ಸಾಹಿತ್ಯ ಸಮ್ಮೇಳನ ನಡೆಸುವ ಸಂದರ್ಭದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದರು.
ವಿಚಾರಗೋಷ್ಠಿ: ಈ ಸಮ್ಮೇಳನದಲ್ಲಿ ವಿಶೇಷವಾಗಿ ಭೂಮಿ ಸಮಸ್ಯೆ, ಜನಪದ ಕಲೆ, ಬುಡಕಟ್ಟು ಜನರ ಕಲೆ, ಸಾಂಸ್ಕೃತಿಕ ಚಟುವಟಿಕೆ ಕುರಿತು ವಿಚಾರಗೋಷ್ಠಿ ನಡೆಸಲಾಗುತ್ತಿದ್ದು, ಇದರಲ್ಲಿ ಮಂಡನೆಯಾಗುವ ವಿಷಯ ಹಾಗೂ ಚರ್ಚಿತವಾಗುವ ವಿಷಯ ಸಮಸ್ಯೆಗಳ ಪರಿಹಾರಕ್ಕೊಂದು ದಿಕ್ಸೂಚಿಯಾಗಬೇಕು. ಸಮ್ಮೇಳನದ ಮೂಲಕ ಹೊಸತೊಂದು ಆಲೋಚನೆ ಹೊರಬರುವಂತೆ ಆಗಬೇಕು ಎಂದು ಹೇಳಿದರು.
ಸಾಹಿತಿ ಡಾ.ನಾ. ಡಿಸೋಜ, ವಿಶ್ವಸಂಸ್ಥೆ ಅಧ್ಯಯನದ ಪ್ರಕಾರ ವಿಶ್ವದಲ್ಲಿ 6400 ಭಾಷೆಗಳಿದ್ದು, ಅದರಲ್ಲಿ ಕನ್ನಡ ಭಾಷೆಯೂ ಒಂದಾಗಿದೆ. ಭಾಷಾ ಬೆಳವಣಿಗೆಗೆ ಪೂರಕವಾದ ವಾತಾವರಣ ಇಲ್ಲದೆ ಇರುವುದರಿಂದ 15 ದಿನಕ್ಕೊಮ್ಮೆ ಒಂದು ಭಾಷೆ ಸಾಯುತ್ತಿದೆ ಎಂದು ವರದಿ ಹೇಳುತ್ತಿದೆ. ಆ ಸಾಲಿಗೆ ಕನ್ನಡ ಭಾಷೆ ಸೇರದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ ಎಂದು ಹೇಳಿದರು.
ತಹಸೀಲ್ದಾರ್ ಆರ್. ರಾಜಣ್ಣ, ಪೌರಾಯುಕ್ತ ನರಸಿಂಹಮೂರ್ತಿ, ತಾಪಂ ಕಾರ್ಯನಿರ್ವಹಣಾಧಿಕಾರಿ ಡಾ. ಸದಾಶಿವ, ತಾಪಂ ಅಧ್ಯಕ್ಷ ಮಹಾಬಲೇಶ್ವರ ಕುಗ್ವೆ, ಲೇಖಕ ವಿಲಿಯಂ ಹಾಜರಿದ್ದರು.
ಸುದ್ದಿ ಮಾಡುವವರಿಗೆ ಆಹ್ವಾನವಿಲ್ಲ: ಇತ್ತೀಚಿನ ದಿನಗಳಲ್ಲಿ ಸಾಗರದಲ್ಲಿ ಕಾರ್ಯಕ್ರಮಮಗಳಿಗೆ ಪತ್ರಕರ್ತರಿಗೆ ಅಧಿಕೃತ  ಆಹ್ವಾನ ನೀಡದ ಸಂಸ್ಕೃತಿ ಬೆಳೆಯುತ್ತಿದೆ. ಸಂಘಟನೆಗಳು ಕಾರ್ಯಕ್ರಮಗಳನ್ನು ಮಾಡುವಾಗ ಸುದ್ದಿ ಮಾಡುವ ಪತ್ರಕರ್ತರಿಗೆ ಅಧಿಕೃತ ಆಹ್ವಾನವನ್ನೇ ನೀಡುತ್ತಿಲ್ಲ. ಈ ಸಾಲಿಗೆ ಸಾಹಿತ್ಯ ಪರಿಷತ್ತು ಕೂಡ ಸೇರಿದೆ. ಪರಿಷತ್ತು ಬುಧವಾರ ಏರ್ಪಡಿಸಿದ್ದ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಗೆ ಪತ್ರಕರ್ತರಿಗೆ ಆಹ್ವಾನ ನೀಡಿರಲಿಲ್ಲ.
ಈಗ ಸಾಹಿತ್ಯ ಪರಿಷತ್ತಿನಂತಹ ಸಾರ್ವಜನಿಕ ಸಂಘಟನೆ ಇಂತಹ ನಡವಳಿಕೆಗೆ ಮುಂದಾಗಿರುವುದು ಅಪೇಕ್ಷಣೀಯವಲ್ಲ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement