ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಯತಿ ಅಮರೇಶ್ವರರಿಗೆ ಹಿರೇಮಠದಲ್ಲಿ ಪಟ್ಟಾಭಿಷೇಕ

Mainashree
Updated On : 17 May 2013, 11:08 am

ಸೊರಬ: ಅಷ್ಟಾಂಗ ಯೋಗ, ಶಿವಯೋಗದಲ್ಲಿ ಸಾಧಕರಾದ, ವೀರಶೈವ ಸಿದ್ಧಾಂತದ ಸಮನ್ವಯ ಮಾರ್ಗಗಳೊಂದಿಗೆ ಪರಿಸರ ಸಂರಕ್ಷಣೆ, ಸಹಜ ಕೃಷಿ, ಭಾರತೀಯ ಸಂಸ್ಕೃತಿಯ, ಸಮಾಜದ ಪರಿವರ್ತಕರೆಂದೆ ಹೆಸರಾದ ಯುವ ಯತಿ ಅಮರೇಶ್ವರರಿಗೆ ಗುರುವಾರ ಜಡೆ ಗ್ರಾಮದ ಹಿರೇಮಠದಲ್ಲಿ ಪಟ್ಟಾಭಿಷೇಕ ನಡೆಯಿತು.
 ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಜಡೆಯ ಹಿರಿಯ ಗುರುಗಳಾದ ಮೌನತಪಸ್ವಿ ಶಾಂತಲಿಂಗ ಶಿವಯೋಗಿಗಳ ಸಾನ್ನಿಧ್ಯದಲ್ಲಿ ಹಾಗೂ ಆಚಾರ್ಯರ ಸಮ್ಮುಖದಲ್ಲಿ ಗೊಗ್ಗೆಹಳ್ಳಿ ಪಂಚಮಠ ಸಂಸ್ಥಾನದ ಸಂಗಮೇಶ್ವರ ಶಿವಾಚಾರ್ಯರು ಪಟ್ಟಾಭಿಷೇಕದೊಂದಿಗೆ ಪಂಚಮುದ್ರಾ, ಆಸನ, ದಂಡ, ಕಮಂಡಲ ಸಹಿತ ಯುವ ಯತಿಗಳಿಗೆ ಘನಬಸವ ಅಮರೇಶ್ವರ ಶಿವಾಚಾರ್ಯ ಶ್ರೀಗಳೆಂದು ನಾಮಾಭಿದಾನ ಪ್ರದಾನ ಮಾಡಿದರು.
 ನಂತರ ಆಗಮಿಕರಿಂದ ಧಾರ್ಮಿಕ ವಿಧಿ, ವಿಧಾನಗಳು ನಡೆದವು, ಶ್ರೀಗಳ ಪುರ ಪಲ್ಲಕ್ಕಿ ಮೆರವಣಿಗೆಯಲ್ಲಿ ತುಮಕೂರು ಚಿಕ್ನಹಳ್ಳಿ ಶಿವರಾಜ್ ತಂಡದವರಿಂದ ವೀರಭದ್ರ ಕುಣಿತ, ಶಿಕಾರಿಪುರ ಶರಾವತಿ ಯುವತಿ ಮಂಡಳಿಯ ದಾಕ್ಷಾಯಣಿ ತಂಡದವರಿಂದ ಡೊಳ್ಳು ಕುಣಿತ, ಹಿರೇಕೆರೂರು ಲಿಂಗದೇವರಕೊಪ್ಪದ ವೀರಭದ್ರ ಪುರವಂತಿಕೆ ಕಲಾ ಸಂಘದ ವೀರಭದ್ರಗೌಡ ತಂಡದವರಿಂದ ಪುರವಂತಿಕೆ, ಸಿರ್ಸಿ ಮಧುರವಳ್ಳಿ ಲಕ್ಕಿಬಾಯ್ಸ್‌ನ ಚಾಮರಾಜ್ ವಿ.ನಾಯ್ಕ್ ತಂಡದವರ ಜಾಂಝ್, ಕಂಚಿ ಕಾಮಕೋಟಿ ಪೀಠದ ಆಸ್ಥಾನ ವಿದ್ವಾನ್ ಎ. ಅವಲಮೂರ್ತಿ ಗೌರಿಬಿದನೂರು ತಂಡದವರ ನಾದಸ್ವಾರ ಗಮನ ಸೆಳೆಯಿತು.
ಪೀಠಾರೋಹಣ ಸಮಾರಂಭದಲ್ಲಿ ಮೌನತಪಸ್ವಿ ಶಾಂತಲಿಂಗ ಶ್ರೀಗಳು, ಗೊಗ್ಗೆಹಳ್ಳಿ ಸಂಗಮೇಶ್ವರ ಶ್ರೀಗಳು, ರಾಜ್ಯದ ಅನೇಕ ವೀರಶೈವ ಮಠದ ಹಾಗೂ ಮಲೆನಾಡು ವೀರಶೈವ ಮಠಾಧೀಶರ ಪರಿಷತ್‌ನ ಎಲ್ಲ ಪೂಜ್ಯಪಾದರು, ವೀರಶೈವ ಸಮಾಜದ ಗಣ್ಯರು ಇದ್ದರು.
 ಜಡೆ ಸಂಸ್ಥಾನ ಮಠದ ಡಾ.ಮಹಾಂತಶ್ರೀಗಳು ಅಧ್ಯಕ್ಷತೆ ವಹಿಸಿದ್ದರು.
ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಿವಮೊಗ್ಗ ಸಹಯೋಗದಲ್ಲಿ ಹಾವೇರಿ ಕಲಾವಿದ ಕೆ.ಆರ್. ಹಿರೇಮಠ್ ಸಂಗಡಿಗರಿಂದ ಚಹಾದ ಜೋಡಿ ಚೂಡದ್ಹಂಗ ಪ್ರಹಸನ ನಡೆಯಿತು. ಪಟ್ಟಾಭಷೇಕ  ಕಾರ್ಯಕ್ರಮದಲ್ಲಿ  ವಿವಿಧ ಜಿಲ್ಲೆ, ತಾಲೂಕಿನ ಸಾವಿರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement