ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಚಾಲಕನಿಗೆ ಹೊಡೆದು ಕಾರು ಅಪಹರಣ

Mainashree
Updated On : 18 May 2013, 12:03 pm

ಸಾಗರ: ಬಾಡಿಗೆಗೆ ಬಂದವರೆ ಚಾಲಕನನ್ನು ಹೊಡೆದು ಇನೋವಾ ಕಾರನ್ನು ಅಪಹರಿಸಿದ ಘಟನೆ ಗುರುವಾರ ತಡರಾತ್ರಿ ತಾಲೂಕಿನ ಇಡುವಾಣಿ ಸಮೀಪ ನಡೆದಿದೆ.
 ಬೆಂಗಳೂರಿನ ಲಗ್ಗೇರಿಯ ಮೂರ್ತಿ ಎಂಬುವವರ ಇನೋವಾ ಕಾರನ್ನು (ಕೆಎ02 ಎಬಿ 1155) ತಮಿಳುನಾಡು ಮೂಲದ ಮೂವರು ಮೇ 15ರಂದು ಬಾಡಿಗೆಗೆ ಪಡೆದು ಮೈಸೂರಿಗೆ ಹೋಗಿದ್ದಾರೆ. ಮೇ 16ರ ಬೆಳಿಗ್ಗೆ ಮೈಸೂರಿನಿಂದ ಹೊರಟು ಶಿವಮೊಗ್ಗ ಹಾಗೂ ಸಾಗರಕ್ಕೆ ಬಂದಿದ್ದಾರೆ. ಸಾಗರದಿಂದ ಸಂಜೆ 7ಕ್ಕೆ ಜೋಗಕ್ಕೆ ತೆರಳಿದ್ದಾರೆ.
 ರಾತ್ರಿ 11ರ ಸುಮಾರಿಗೆ ಹೊನ್ನಾವರಕ್ಕೆ ಹೊರಟ ಬಾಡಿಗೆದಾರರು ಕಾರ್ಗಲ್ ಬಳಿ ಮಾರ್ಗಮಧ್ಯದಲ್ಲಿ ಬಂದ ಮೂವರ ಪೈಕಿ ಓರ್ವ ಎದೆನೋವು ಸಾಗರ ಆಸ್ಪತ್ರೆಗೆ ಹೋಗೋಣ ಎಂದು ಒತ್ತಾಯಿಸಿದ್ದಾನೆ. ಚಾಲಕ ಮೋಹನ ಕುಮಾರ್ ಕಾರನ್ನು ಸಾಗರದ ಕಡೆ ತಿರುಗಿಸಿದ್ದಾನೆ. ಕಾರು ಇಡುವಾಣಿ ಸಮೀಪ ಬರುತ್ತಿದ್ದಂತೆಯೆ ಮೂತ್ರವಿಸರ್ಜನೆ ನೆಪದಲ್ಲಿ ಕಾರಿನಿಂದ ಇಳಿದು ಚಾಲಕನನ್ನು ಹೊರಗೆಳೆದು ಆತನ ಮೇಲೆ ಹಲ್ಲೆ ನಡೆಸಿ ಇನೋವಾ ಕಾರನ್ನು ಅಪಹರಿಸಿಕೊಂಡು ನಾಪತ್ತೆಯಾಗಿದ್ದಾರೆ.
 ರಾತ್ರಿ ಚಾಲಕ ಮೋಹನ ಕುಮಾರ್ ಕಾರ್ಗಲ್ ಠಾಣೆಗೆ ದೂರು ನೀಡಿದ್ದಾನೆ. ಸ್ಥಳಕ್ಕೆ ಡಿ.ವೈ.ಎಸ್.ಪಿ., ಸರ್ಕಲ್ ಇನ್ಸ್‌ಪೆಕ್ಟರ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement