ಬೀಗ ಒಡೆದು ಮನೆ ಕಳವು
ಕ.ಪ್ರ.ವಾರ್ತೆ, ಶಿಕಾರಿಪುರ, ಮೇ 17 ಮನೆ ಮಾಲಿಕರು ಪರಸ್ಥಳಕ್ಕೆ ತೆರಳಿದ ಸಂದರ್ಭ ಬಳಸಿಕೊಂಡು ಮನೆಯಲ್ಲಿನ ಸಾವಿರಾರು ರೂ. ಮೌಲ್ಯದ ಆಭರಣಗಳನ್ನು ಕಳ್ಳರು ದೋಚಿದ ಪ್ರಕರಣ ಪಟ್ಟಣದ ಮಂಡಿಪೇಟೆಯಲ್ಲಿ ಶುಕ್ರವಾರ ಬೆಳಗಿನ ಜಾವ ನಡೆದಿದ್ದು, ಘಟನಾ ಸ್ಥಳಕ್ಕೆ ಆಗಮಿಸಿದ ಪೋಲಿಸರು ಸಿ ಆರೋಪಿಗಳ ಪತ್ತೆಗೆ ವ್ಯಾಪಕ ಕ್ರಮ ಕೈಗೊಂಡಿದ್ದಾರೆ.
ಪಟ್ಟಣದ ಮಂಡಿಪೇಟೆಯಲ್ಲಿನ ರಾಘವೇಂದ್ರ ಎಂಬುವವರು ಕಳೆದ 2 ದಿನದ ಹಿಂದೆ ಪರಸ್ಥಳಕ್ಕೆ ತೆರಳಿದ್ದು, ಇದನ್ನು ಗಮನಿಸಿದ ಕಳ್ಳರು ಶುಕ್ರವಾರ ಬೆಳಗಿನ ಜಾವ ಮನೆಯ ಮುಂಭಾಗದ ಬೀಗ ಒಡೆದು ಕಳವು ಮಾಡಿದ್ದಾರೆ.
ಶುಕ್ರವಾರ ಮನೆಗೆ ಬಂದ ಮಾಲಿಕ ಬೀಗ ಒಡೆದಿರುವುದನ್ನು ಗಮನಿಸಿದಾಗ ಕಳವು ನಡೆದಿದ್ದು ತಿಳಿದಿದೆ. ಮನೆಯಲ್ಲಿನ ಬೆಳ್ಳಿ ತಟ್ಟೆ, ಲೋಟ, ನಾಣ್ಯ ಹಾಗೂ ಬಂಗಾರದ ಒಲೆಯನ್ನು ಕಳ್ಳರು ಅಪಹರಿಸಿರುವುದಾಗಿ ಮಾಲಿಕ ರಾಘವೇಂದ್ರ ಪೋಲಿಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.