ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮಾರಿಕಾಂಬೆಗೆ ಕೆಂಡದ ಸೇವೆ

Mainashree
Updated On : 18 May 2013, 12:03 pm

ಜೋಗ್‌ಫಾಲ್ಸ್: ಕಾರ್ಗಲ್‌ನ ಶಕ್ತಿ ದೇವತೆ ಮಾರಿಕಾಂಬಾ ದೇವಿಯ ಅದ್ಧೂರಿ ಜಾತ್ರೋತ್ಸವದ 3 ನೇ ದಿನ ನಡೆದ ಕಾರ್ಯಕ್ರಮದಲ್ಲಿ ಹರಕೆ ಹೊತ್ತ ಭಕ್ತಾಧಿಗಳಿಂದ ದೇವಿಗೆ ಕೆಂಡದ ಮೇಲೆ ನಡೆಯುವ ಮೂಲಕ ತಮ್ಮ ಹರಕೆಯನ್ನು ಒಪ್ಪಿಸಿ ಧನ್ಯತಾ ಭಾವ ಮೆರೆದರು.
 ಕಳೆದ 60 ವರ್ಷಗಳಿಂದಲೂ ನಡೆದು ಬರುತ್ತಿರುವ ದ್ರಾವಿಡ ಶೈಲಿಯ ಈ ಜಾತ್ರಾ ಮಹೋತ್ಸವದಲ್ಲಿ ಸಹಸ್ರಾರು ಭಕ್ತಾಧಿಗಳು ತಮ್ಮ ಇಷ್ಟಾರ್ಥವನ್ನು ಈಡೇರಿಸುವಂತೆ ವಿವಿಧ ರೀತಿಯ ಪೂಜೆ, ಹರಕೆಗಳನ್ನು ತೀರಿಸಿದರು.
ಸಾಂಸ್ಕೃತಿಕ ಮೆರವಣಿಗೆ: ನಂತರ ನಡೆದ ಮಾರಿಕಾಂಬಾ ದೇವಿಯ ಉತ್ಸವ ಮೂರ್ತಿಯ ರಥಯಾತ್ರೆಯಲ್ಲಿ ಸೇಲಂ ತಂಡದ ಮತ್ತು ಗುರುವಾಯನಕೆರೆಯ ಸೃಷ್ಟಿ ಆರ್ಟ್ಸ್ ತಂಡದ ಕೀಲು ಕುದುರೆ, ಕರಗ ನೃತ್ಯ, ಗೊಂಬೆ ಕುಣಿತ, ನವಿಲು ಕುಣಿತ ನೃತ್ಯದ ಸಾರಥ್ಯದೊಂದಿಗೆ ಕಾರ್ಗಲ್‌ನ ಪ್ರಮುಖ ಬೀದಿಗಳಲ್ಲಿ ಭವ್ಯ ಅಲಂಕೃತ ರಥದಲ್ಲಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯು ಬೆಳಗಿನ ಜಾವ 4 ವರೆಗೂ ನಡೆದಿದ್ದರೂ ಭಕ್ತಾಧಿಗಳು ಅತ್ಯುತ್ಸಾಹದಿಂದ ಪಾಲ್ಗೊಂಡರು.
 ಜಾತ್ರೋತ್ಸವದ ನಾಲ್ಕನೇ ದಿನವಾದ ಇಂದು ಶ್ರೀ ದೇವಿಯ ಶಕ್ತಿ ಕರಗವನ್ನು ಬಣ್ಣದ ಓಕುಳಿಯ ಮೆರವಣಿಗೆಯೊಂದಿಗೆ ಶರಾವತಿ ನದಿ ತೀರದಲ್ಲಿ ವಿಸರ್ಜಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement