ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಭಾವಗೀತೆ ಸಿ.ಡಿ ಬಿಡುಗಡೆ

Vishwanath S
Updated On : 19 May 2013, 1:08 am

ಜೋಗ್‌ಫಾಲ್ಸ್: ಇಲ್ಲಿನ ಯುವ ಬರಹಗಾರ ಸ್ಟ್ಯಾನಿ ಲೋಪಿಸ್ ಅವರು ರಚಿಸಿದ ಕನ್ನಡ ಸಾಮಾಜಿಕ ಜನಪದ ಭಾವಗೀತೆಗಳ ಸಿ.ಡಿ.ಯನ್ನು ಇತ್ತೀಚಿಗೆ ಶಿವಮೊಗ್ಗದ ಗೋಪಾಳ ಬಡಾವಣೆಯ ಚರ್ಚ್‌ನ ಧರ್ಮಗುರು ಫಾದರ್ ಫೆಲಿಕ್ ಸರೊನ್ನಾ ಬಿಡುಗಡೆಗೊಳಿಸಿದರು.  ಪ್ರತಿಯೊಬ್ಬರಲ್ಲಿಯೂ ಅಗಾಧ ಪ್ರತಿಭೆಗಳಿದ್ದು, ಅದನ್ನು ವ್ಯಕ್ತಪಡಿಸಲು ಹಲವು ಮಾರ್ಗ, ವೇದಿಕೆ ಸಿಗುತ್ತವೆ. ಅದರ ಸದ್ಬಳಕೆ ಮಾಡಿಕೊಳ್ಳುವವರು ಮಾತ್ರ ಜೀವನದಲ್ಲಿ ಮುಂದುವರೆಯುತ್ತಾರೆ. ತಮಗೆ ದೊರೆತ ಪ್ರಥಮ ಅವಕಾಶದಲ್ಲಿಯೇ ಅದರ ಸದುಪಯೋಗ ಮಾಡಿಕೊಂಡ ಸ್ಟ್ಯಾನಿ ಲೋಪಿಸ್  ಮತ್ತಷ್ಟು ಪಕ್ವವಾಗುವ ಮೂಲಕ ತಮ್ಮ ಜೀವನದ ನೋವು, ನಲಿವುಗಳನ್ನು, ತಾವು ಕಳೆದ ಬಾಲ್ಯದ ದಿನದ ಮೆಲುಕುಗಳನ್ನು ಹಾಡಿನ ರೂಪದಲ್ಲಿ ಹೊರ ತಂದಿರುವುದು ಶ್ಲಾಘನೀಯ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement