ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆ

Vishwanath S
Updated On : 19 May 2013, 1:08 am

ಕ.ಪ್ರ.ವಾರ್ತೆ  ,  ಶಿವಮೊಗ್ಗ  ,   ಮೇ 18
ಕೃಷಿ ಇಲಾಖೆಯು ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ರೈತರಿಗೆ ಪ್ರಮಾಣಿತ ಬಿತ್ತನೆ ಬೀಜ ಹಾಗೂ ನಿಜಚೀಟಿ ಬಿತ್ತನೆ ಬೀಜಗಳ ಪೂರೈಕೆ ಹಾಗೂ ಇತರೆ ಹೂಡುವಳಿ ಯೋಜನೆಯಡಿ ಎಲ್ಲಾ ವರ್ಗದ ರೈತರಿಗೆ ಗರಿಷ್ಠ 5 ಎಕರೆ ಮಿತಿಯೊಳಗೆ ಅಥವಾ ಹಿಡುವಳಿ ಯಾವುದು ಕಡಿಮೆಯೋ ಆ ವಿಸ್ತೀರ್ಣಕ್ಕೆ ಸೀಮಿತಗೊಳಿಸಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜಗಳನ್ನು ಮಾರಾಟ ಮಾಡಲು ಕ್ರಮ ಕೈಗೊಂಡಿದೆ.
ಬಿತ್ತನೆ ಬೀಜಗಳ ವಿತರಣೆಯನ್ನು ಮೇ 20ರಿಂದ ಜಿಲ್ಲೆಯ ಎಲ್ಲಾ 40 ರೈತ ಸಂಪರ್ಕ ಕೇಂದ್ರಗಳ ಮತ್ತು 47 ಹೆಚ್ಚುವರಿ ಬೀಜ ಮಾರಾಟ ಕೇಂದ್ರಗಳ ಮುಖಾಂತರ ಹಂತಹಂತವಾಗಿ ಪ್ರಾರಂಭಿಸಲಾಗುವುದು. ಪ್ರತಿ ಕೆ.ಜಿ. ಬಿತ್ತನೆ ಬೀಜಕ್ಕೆ ಪ್ರಮಾಣಿತ ಬತ್ತ 7 , ನಿಜಚೀಟಿ 6, ಹೈ.ಜೋಳ 24 (ನಿಜಚೀಟಿ), ಪ್ರಮಾಣಿತ 25, ಹೈ. ಮೆಕ್ಕೆಜೋಳ 35, ರಾಗಿ 11 (ನಿಜ ಚೀಟಿ), ಪ್ರಮಾಣಿತ 12,  ತೊಗರಿ- 19  (ನಿಜಚೀಟಿ), ರು. 20 (ಪ್ರಮಾಣಿತ), ಹಲಸಂದೆ ಪ್ರಮಾಣಿತ ರು. 20 ನಿಗಧಿಪಡಿಸಲಾಗಿದೆ.
ಬೀಜ ಪಡೆಯುವ ಕ್ಷೇತ್ರ ಗುಂಟೆಗಳಿದ್ದಲ್ಲಿ ಆ ಅನುಪಾತದಲ್ಲಿ ರಿಯಾಯಿತಿ ಸೌಲಭ್ಯ ನೀಡಲಾಗುವುದು. ಆ ಪಾಕೀಟ್‌ನಲ್ಲಿ ಉಳಿದ ಬೀಜಕ್ಕೆ ಸಂಬಂಧಪಟ್ಟ ರೈತರು ಪೂರ್ಣ ದರ ಸಂದಾಯ ಮಾಡತಕ್ಕದ್ದು. ಯಾವುದೇ ಕಾರಣಕ್ಕೂ ತೆರೆದ ಪ್ಯಾಕೇಟ್‌ಗಳಲ್ಲಿ ಬೀಜ ಮಾರಾಟ ಮಾಡಲಾಗುವುದಿಲ್ಲ. ಯಾವುದೇ ಎಷ್ಟೇ ಬೆಳೆಯಾದರೂ ಸಹ ಪ್ರತಿ ಎಕರೆಗೆ ಒಂದು ಪಾಕೇಟ್‌ನಂತೆ ಗರಿಷ್ಠ 5 ಎಕರೆಗೆ 5 ಪಾಕೇಟ್ ಬಿತ್ತನೆ ಬೀಜವನ್ನು ಮಾತ್ರ ಪೂರೈಸಲಾಗುವುದು. ಹಂತಹಂತಗಳಲ್ಲಿ ಸೌಲಭ್ಯ ಪಡೆಯುವಾಗ ಸಹ ಈ ನಿಯಮದನ್ವಯ ದಾಖಲೆಗಳನ್ನು ಪರಿಶೀಲಿಸಿ ರಿಯಾಯಿತಿ ಸೌಲಭ್ಯ ನೀಡಲಾಗುವುದು.
ಜಿಲ್ಲೆಗೆ ಅಗತ್ಯವಿರುವ ಬಿತ್ತನೆ ಬೀಜಗಳನ್ನು ದಾಸ್ತಾನಿಕರಿಸಲಾಗಿದೆ. ರೈತ ಬಾಂಧವರು ವಿವರಗಳಿಗಾಗಿ ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರ, ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸುವಂತೆ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ. ಶಿವಮೂರ್ತಪ್ಪ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement