ಸಹಾಯಧನ ವಿತರಣೆ
ಸೊರಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ವತಿಯಿಂದ ತಾಲೂಕಿನ ಜಂಬೆಹಳ್ಳಿ ಗ್ರಾಮದಲ್ಲಿ ಗಾಳಿಯಿಂದ ಮರ ಬಿದ್ದು ಹಾನಿಗೊಂಡಿದ್ದ ಮನೆಗೆ ಸಹಾಯಧನ ನೀಡಿದ್ದಾರೆ.
ಇಲ್ಲಿನ ಪರಸಪ್ಪ ಅವರಿಗೆ ಗುಡವಿ ಕಾರ್ಯಕ್ಷೇತ್ರದ ಚಂದ್ರಗುತ್ತಿ ವಲಯದ ಮೇಲ್ವಿಚಾರಕ ಸುರೇಶ್ ಹೆಗಡೆ ಹಾಗೂ ಗ್ರಾಮದ ರೇಣುಕಾ ಸಂಘದ ಸೇವ ಪ್ರತಿನಿಧಿ ಕುಮಾರ ಗೌಡ, ಜಂಬಳ್ಳಿ ಒಕ್ಕೂಟದ ಅಧ್ಯಕ್ಷ ಪುಟ್ಟರಾಜು, ಹನುಮಂತಪ್ಪ ಖುದ್ದು ಹಾಜರಿದ್ದು, ಸಂಸ್ಥೆಯ 3 ಸಾವಿರ ರು.ಮೌಲ್ಯದ ಚೆಕ್ ವಿತರಿಸಿದರು.