ಪುರಪ್ರವೇಶ,ಗುರುವಂದನೆ
ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಒಕ್ಕಲಿಗ ಸಂಘ ಮೇ 23ರಂದು ಆದಿಚುಂಚನಗಿರಿ ಶ್ರೀ ಪುರಪ್ರವೇಶ, ಗುರುವಂದನಾ ಮತ್ತು ಪಾದ ಪೂಜೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ 72ನೇ ಪೀಠಾಧ್ಯಕ್ಷ ಶ್ರೀ ನಿರ್ಮಾಲಾನಂದನಾಥ ಸ್ವಾಮೀಜಿ ಅವರು ಪ್ರಥಮ ಬಾರಿಗೆ ನಗರಕ್ಕೆ ಪುರಪ್ರವೇಶ ಮಾಡುತ್ತಿದ್ದು, ಒಕ್ಕಲಿಗ ಸಮುದಾಯ ಮಾಚೇನಹಳ್ಳಿ ಬಳಿ ಇರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಆವರಣದಲ್ಲಿ ಸಂಜೆ 4ಗಂಟೆಗೆ ಮಂಗಳವಾದ್ಯ, ಪೂರ್ಣಕುಂಭದೊಂದಿಗೆ ಸ್ವಾಗತಿಸಲಿದೆ. ನಂತರ ರಾಜಬೀದಿ ಉತ್ಸವ ನಡೆಯಲಿದ್ದು, ಮಾಚೇನಹಳ್ಳಿಯಿಂದ ಹೊರಟು ಹರಿಗೆ, ಎಂಆರ್‌ಎಸ್ ವೃತ್ತ, ಹೊಳೆ ಬಸ್ ನಿಲ್ದಾಣ, ಬಿ.ಎಚ್. ರಸ್ತೆ ನೆಹರು ರಸ್ತೆ ಮಾರ್ಗವಾಗಿ, ಬಾಲರಾಜ ಅರಸ್ ರಸ್ತೆಯಲ್ಲಿರುವ ಜಿಲ್ಲಾ ಒಕ್ಕಲಿಗ ಸಂಘದ ಆವರಣಕ್ಕೆ ತಲುಪಲಾಗುತ್ತದೆ. ನಂತರ ಸಂಜೆ 6ಕ್ಕೆ ಗುರುವಂದನಾ ಮತ್ತು ಪಾದಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಸಂಬಂಧ ಸಮುದಾಯದ ಎಲ್ಲಾ ಬಾಂಧವರು ಕಾರ್ಯಕ್ರದಲ್ಲಿ ಪಾಲ್ಗೊಳ್ಳುವಂತೆ ಸಂಘ ಕೋರಿದೆ.
ಚೆಸ್ ತರಬೇತಿ ಶಿಬಿರ
ಶಿವಮೊಗ್ಗ: ನಳಂದ ಚೆಸ್ ಅಕಾಡೆಮಿ ಮೇ 20 ರಿಂದ 26ರ ವರೆಗೆ ವಿನೋಬನಗರದ ಪೊಲೀಸ್ ಚೌಕಿ ಮತ್ತು ಗೋಪಾಲಗೌಡ ಬಡಾವಣೆಯಲ್ಲಿ ಬೇಸಿಗೆ ಚೆಸ್ ತರಬೇತಿ ಶಿಬಿರ ಏರ್ಪಡಿಸಿದೆ. ಚೆಸ್ ಕ್ರೀಡೆ ಕಲಿಯುವುದರಿಂದ ಏಕಾಗ್ರತೆ, ಬುದ್ಧಿಶಕ್ತಿ ಹೆಚ್ಚಾಗುವುದಲ್ಲದೆ ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಹೆಚ್ಚಿಸುತ್ತದೆ. ಆದರಿಂದ ಆಸಕ್ತ ಮಕ್ಕಳು ಚೆಸ್ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಬಹುದು ಎಂದು ಅಕಾಡೆಮಿಯ ಯುವರಾಜ್ ತಿಳಿಸಿದ್ದಾರೆ. ವಿವರಗಳಿಗಾಗಿ- 8748850011.
ಅರ್ಜಿ ಆಹ್ವಾನ
ಶಿವಮೊಗ್ಗ: ಮಲೆನಾಡು ಸಿರಿ ಗ್ರಾಮೀಣಾಭಿವೃದ್ಧಿ ವಿದ್ಯಾಸಂಸ್ಥೆ ಉಚಿತ ಕಂಪ್ಯೂಟರ್, ಟೈಲರಿಂಗ್ ಮತ್ತು ಬ್ಯೂಟಿಷಿಯನ್ ತರಬೇತಿಗೆ ಅರ್ಜಿ ಆಹ್ವಾನಿಸಿದೆ. ಯವಕ, ಯುವತಿಯರಿಗೆ ಸ್ವ ಉದ್ಯೋಗ ಕಲ್ಪಿಸಿ ಕೊಡುವ ಸದುದ್ದೇಶದಿಂದ ಉಚಿತ ಕಂಪ್ಯೂಟರ್, ಟೈಲರಿಂಗ್ ಮತ್ತು ಬ್ಯೂಟಿಷಿಯನ್ ತರಬೇತಿ ನೀಡಲಿದೆ. 14 ವರ್ಷ ಮೇಲ್ಪಟ್ಟವರು ಇದರ ಸದುಪಯೋಗ ಪಡೆದುಕೊಳ್ಳಬಹುದು. ಕಂಪ್ಯೂಟರ್ ಕೋರ್ಸ್‌ನಲ್ಲಿ ಕಂಪ್ಯೂಟರ್ ಫಂಡಮೆಂಟಲ್ಸ್, ಇಂಟರ್‌ನೆಟ್, ಬೇಸಿಕ್(ಎಂಎಸ್‌ಆಫೀಸ್), ಟ್ಯಾಲಿ, ಡಿಟಿಪಿ ಹೇಳಿಕೊಡಲಾಗುತ್ತದೆ. ಮಸಾಜ್ ಥೆರಪಿಸ್ಟ್, ಹೇರ್ ಸ್ಟ್ಯಾಲಿಸ್ಟ್, ಹೇರ್ ಕೆಲರಿಸ್ಟ್, ಹೇರ್ ಕಟ್ಟಿಂಗ್ಸ್ ಸ್ಪೆಷಾಲಿಟಿ, ಟೈಲರಿಂಗ್ ಕೋರ್ಸ್‌ನಲ್ಲಿ, ಹ್ಯಾಂಡ್ ಎಂಡ್ರೈಡ್ರಿ, ಸ್ಕಿಲ್ಡ್ ಸುಯಿಂಗ್ ಆಪರೇಟರ್ಸ್, ಮಕ್ಕಳ ಬಟ್ಟೆ ಹೊಲಿಗೆ, ಲೇಡಿಸ್ ಬಟ್ಟೆ ಹೊಲಿಗೆ, ಜೆಂಟ್ಸ್ ಬಟ್ಟೆ ಹೊಲಿಗೆ ಬಗ್ಗೆ ತರಬೇತಿ ನೀಡಲಾಗುವುದು ಎಂದು ಸಂಸ್ಥೆ ತಿಳಿಸಿದೆ. ವಿವರಗಳಿಗಾಗಿ- 9035746446.