ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮಳೆ: ವಿದ್ಯುತ್ ಪೂರೈಕೆ ಸ್ಥಗಿತ

Rashmi Kasaragodu
Updated On : 20 May 2013, 10:51 am

ಭದ್ರಾವತಿ: ಶನಿವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ ಪಟ್ಟಣದ ನ್ಯೂಟೌನ್ ಮತ್ತು ಜನ್ನಾಪುರ ವಾಸಿಗಳು 24 ಗಂಟೆಗಳಿಗಿಂತ ಹೆಚ್ಚು ಕಾಲ ವಿದ್ಯುತ್ ಸರಬರಾಜಿಲ್ಲದೆ ಕಾಲ ಕಳೆಯಬೇಕಾದ ಪ್ರಸಂಗ ಎದುರಾಯಿತು.
 ಶನಿವಾರ ಸಂಜೆ ರಭಸವಾದ ಗಾಳಿಯೊಂದಿಗೆ ಮಳೆ ಪ್ರಾರಂಭವಾದಾಗ ನ್ಯೂಟೌನ್ ವಿಭಾಗದಲ್ಲಿ ವಿಐಎಸ್‌ಎಲ್ ನಗರಾಡಳಿತ ಪ್ರದೇಶದಲ್ಲಿ ಹಲವಾರು ಕಡೆ ಹಳೆಯ ಮರಗಳು ಬುಡಮೇಲಾಗಿ ನೆಲಕ್ಕುರುಳಿ ವಿದ್ಯುತ್ ತಂತಿಗಳು ಹರಿದು ಸರಬರಾಜು ಕಡಿತಗೊಳಿಸಬೇಕಾಗಿ ಬಂದಿತು.    ಮೆಸ್ಕಾಂ ಸಿಬ್ಬಂದಿ ರಾತ್ರಿಯೆಲ್ಲಾ ಮರ ಕಡಿಯುವ ಕೆಲಸ ಮಾಡಬೇಕಾಯಿತಾದರೂ ಭಾನುವಾರ ಹಗಲೂ ಸಹ ಮರ ಕಡಿಯುವ ಕೆಲಸ ಮುಂದುವರೆಸಬೇಕಾಯಿತು. ಇದರಿಂದ ಶನಿವಾರ ರಾತ್ರಿ ಮತ್ತು ಭಾನುವಾರ ಹಗಲಿಡೀ ವಿದ್ಯುತ್ ಸರಬರಾಜಿಲ್ಲದೆ ನ್ಯೂಟೌನ್ ಮತ್ತು ಜನ್ನಾಪುರ ಭಾಗದ ಜನರು ಪರಿತಪಿಸಬೇಕಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement