ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ
ಸಾಗರ: ತಾಲ್ಲೂಕಿನ ಎಂ.ಎಲ್.ಹಳ್ಳಿಯ ಸಾವಿತ್ರಮ್ಮ ಮತ್ತು ಎಲ್.ಟಿ.ತಿಮ್ಮಪ್ಪ ಹೆಗಡೆ ಪ್ರಾತಿಷ್ಠಾನ ಪ್ರತಿವರ್ಷದಂತೆ ಈ ವರ್ಷವೂ ಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಅರ್ಜಿ ಆಹ್ವಾನಿಸಿದೆ.
ಪಿಯುಸಿ ಎರಡನೇ ವರ್ಷದ ನಂತರ, ಪದವಿ, ಸ್ನಾತಕೋತ್ತರ ಹಾಗೂ ತಾಂತ್ರಿಕ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ಇತ್ತೀಚಿನ ಭಾವಚಿತ್ರ, ಅಂಕಪಟ್ಟಿ, ಆದಾಯ ಪ್ರಮಾಣಪತ್ರವನ್ನು ಜೂನ್ 10ರೊಳಗಾಗಿ ಸಾವಿತ್ರಮ್ಮ ಮತ್ತು ಎಲ್.ಟಿ.ತಿಮ್ಮಪ್ಪ ಹೆಗಡೆ ಪ್ರತಿಷ್ಠಾನ ಅಂಚೆ ಎಂ.ಎಲ್.ಹಳ್ಳಿ ಈ ವಿಳಾಸಕ್ಕೆ ಅಂಚೆ ಮೂಲಕ ಮಾತ್ರ ಕಳಿಸಬೇಕು.
ಅರ್ಜಿ ಫಾರಂಗಳು ಸಾಗರದ ಎಸ್.ಬಿ.ಎಂ. ರಸ್ತೆಯಲ್ಲಿರುವ ಸಾಗರ ಮುದ್ರಣದಲ್ಲಿ ದೊರೆಯುತ್ತದೆ. ತಡವಾಗಿ ಬಂದ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ ಎಂದು ಸಾವಿತ್ರಮ್ಮ ಮತ್ತು ಎಲ್.ಟಿ.ತಿಮ್ಮಪ್ಪ ಹೆಗಡೆ ಪ್ರಾತಿಷ್ಠಾನ ಪಪ್ರಕಟಣೆಯಲ್ಲಿ ತಿಳಿಸಲಾಗಿದೆ.