ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ವಿಪ್ರ ವೈವಾಹಿಕ ಸಮಸ್ಯೆ ಪರಿಹಾರಕ್ಕೆ ವೆಬ್‌ಸೈಟ್

Rashmi Kasaragodu
Updated On : 20 May 2013, 10:42 am

ಕಪ್ರ ವಾರ್ತೆ,ಶಿವಮೊಗ್ಗ, ಮೇ 19
2012ರ ಮೇ 19 ಮತ್ತು 20ರಂದು ಜಿಲ್ಲೆಯ ವಿವಿಧ ವಿಪ್ರ ಸಮಾಜದ ಸಂಘಟನೆಗಳು ಸೇರಿ ಶಿವಮೊಗ್ಗದಲ್ಲಿ ವಿಪ್ರ ಜಾಗೃತಿ ಸಮಾವೇಶ ಹಮ್ಮಿಕೊಂಡಿದ್ದವು, ಇಲ್ಲಿ ವಿಪ್ರ ವೈವಾಹಿಕ ಸಮಸ್ಯೆ ಪರಿಹಾರಕ್ಕೆ ವಿಶೇಷ ಪ್ರಯತ್ನಗಳಾಗಬೇಕೆಂದು ನಿರ್ಣಯಿಸಲಾಗಿತ್ತು. ಅದರಂತೆ ವಿವಿಧ ಕಾರ್ಯಗಳು ನಡೆದಿವೆ.
 ಅದರ ಒಂದು ಭಾಗವಾಗಿ ಭಾನುವಾರ ಶಾಂತಲಾ ಸ್ಪೆರೋ ಕ್ಯಾಸ್ಟ್ ಸಭಾಂಗಣದಲ್ಲಿ ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ವಿಪ್ರ ವಿವಾಹ ಶಿವಮೊಗ್ಗ (ಢ್ಝಠ್ಠಛಢ್ಝಢಝಛಝ್ಝಟ್ಟ್ಜಛ.್ಝಟಿ) ಎಂಬ ಅಂತರ್ಜಾಲ ತಾಣ ವಿದ್ಯುಕ್ತವಾಗಿ ಚಾಲನೆಗೊಂಡಿತು.
ವೆಬ್‌ಸೈಟ್ ವಿಶೇಷ: ಶಿವಮೊಗ್ಗದ ಬಿಎಸ್‌ಎನ್‌ಎಲ್ ವಿಪ್ರ ತಂಡವು ಯಾವುದೇ ವಾಣಿಜ್ಯಿಕ ವ್ಯವಹಾರದ ಅಂತರ್ಜಾಲಕ್ಕೆ ಕಡಿಮೆ ಇಲ್ಲದಂತೆ ವೆಬ್‌ಸೈಟವೊಂದನ್ನು ವಿನ್ಯಾಸಗೊಳಿಸಿದೆ.
 ವೈವಾಹಿಕ ಆಸಕ್ತ ಬ್ರಾಹ್ಮಣ ಯುವಕ ಯುವತಿಯರು ತಮ್ಮ ವೈಯಕ್ತಿಕ ಮಾಹಿತಿಯನ್ನು ಈ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಸುವ ವ್ಯವಸ್ಥೆ ಮಾಡಲಾಗಿದೆ. ಉದ್ಘಾಟನೆ: ನೂತನ ಅಂತರ್ಜಾಲ ತಾಣವನ್ನು ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಡಾ. ಬಿ. ವೆಂಕಟರಾವ್ ಉದ್ಘಾಟಿಸಿದರು. ಮಹಾಸಭಾ ಅಧ್ಯಕ್ಷ ಡಾ. ಬಿ.ಎನ್.ವಿ. ಸುಬ್ರಹ್ಮಣ್ಯ, ಶಾಸಕ ಕೆ.ಬಿ. ಪ್ರಸನ್ನಕುಮಾರ್, ನಗರಸಭೆ ಸದಸ್ಯೆ ಸುರೇಖಾ ಮುರಳೀಧರ್, ಆರ್. ಅಚ್ಯುತರಾವ್, ಕೆ. ದಿವಾಕರ್, ಕೆ.ವಿ. ವಸಂತಕುಮಾರ್, ಮ.ಸ.ನಂಜುಂಡಸ್ವಾಮಿ, ಅನಂತ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement