ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

'ಶಂಕರಭಟ್ಟರ ಸಾಹಿತ್ಯದ ಗಂಭೀರ ಚಿಂತನೆ ಅಗತ್ಯ'

Rashmi Kasaragodu
Updated On : 20 May 2013, 10:49 am

ಕ.ಪ್ರ. ವಾರ್ತ್ಣೆ ಸಾಗರ್ಣ  ಮೇ 19
 ಕನ್ನಡ ಭಾಷೆ ಬಗೆಗಿನ ಡಾ.ಡಿ.ಎನ್.ಶಂಕರಭಟ್ಟರ ಪುಸ್ತಕಗಳನ್ನು ಕನ್ನಡ ಲೋಕ ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಶಿವಮೊಗ್ಗ ಡಿವಿಎಸ್ ಕಾಲೇಜಿನ ಪ್ರಾಧ್ಯಾಪಕ ಡಾ.ಹೆಚ್.ಟಿ.ಕೃಷ್ಣಮೂರ್ತಿ ಹೇಳಿದರು.
 ಶಿವಮೊಗ್ಗ ಕರ್ನಾಟಕ ಸಂಘ ತಾಲ್ಲೂಕಿನ ಹೆಗ್ಗೋಡಿನ ಕಿನ್ನರಮೇಳ ಸಭಾಂಗಣದಲ್ಲಿ ಭಾನುವಾರ ಸಂಜೆ ಏರ್ಪಡಿಸಿದ್ದ ಡಾ.ಡಿ.ಎನ್.ಶಂಕರಭಟ್ಟರಿಗೆ ಡಾ.ಶಂಬಾ ಜೋಷಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಅಭಿನಂದನಾ ಭಾಷಣ ಮಾಡಿದರು.
ಭಾಷೆ ಕಲಿಸುವಲ್ಲಿ ವಿಫಲ: ಕನ್ನಡ ಭಾಷೆ ಬಗೆಗಿನ ಶಂಕರ ಭಟ್ಟರ ವಿಚಾರಗಳನ್ನು ಚೆನ್ನಾಗಿದೆ ಎನ್ನುತ್ತೇವೆಯೇ ಹೊರತು ಆ ವಿಚಾರಗಳನ್ನು ಬಳಸಿಕೊಳ್ಳುತ್ತಿಲ್ಲ.
   ಮಕ್ಕಳಿಗೆ ನುಡಿಯನ್ನು ತಪ್ಪಾಗಿ ಕಲಿಸುತ್ತಿದ್ದೇವೆಯೇ ಹೊರತು ಸೃಜನಶೀಲ ಕನ್ನಡಭಾಷೆಯನ್ನು ಕಲಿಸಲು ನಾವು ವಿಫಲರಾಗುತ್ತಿದ್ದೇವೆ ಎಂದು ಹೇಳಿದರು.
 ಶಂಕರಭಟ್ಟರು ಕನ್ನಡ ಭಾಷೆ ಕುರಿತಾಗಿ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಅವರ ವಿಚಾರಗಳಿಗೆ ವಿರೋಧ, ಚರ್ಚೆ ನಡೆದಾಗಲೆಲ್ಲ ಅದಕ್ಕೆ ಮತ್ತೊಂದು ಪುಸ್ತಕ ಬರೆಯುವ ಮೂಲಕ ಭಟ್ಟರು ಉತ್ತರ ಕೊಟ್ಟಿದ್ದಾರೆ.
  ಕನ್ನಡ ಭಾಷೆಗೆ 31 ಅಕ್ಷರ ಸಾಕು, ಮಹಾಪ್ರಾಣ ಬೇಕಿಲ್ಲ ಎಂಬುದಷ್ಟೇ ಭಟ್ಟರ ವಿಚಾರವಲ್ಲ. ಅವರ ವಿಚಾರದ ಹಿಂದೆ ತಾತ್ವಿಕತೆ ಇದೆ. ಅದನ್ನು ನಾವು ಅರ್ಥಮಾಡಿಕೊಂಡಿಲ್ಲ ಎಂದರು.
ಕಲಿಸುವ ಕ್ರಮ ಮುಖ್ಯ: ಮಕ್ಕಳ ಕಲಿಕೆಗೆ ಯಾವ ಮಾಧ್ಯಮ ಬೇಕು ಎಂಬುದು ಮಾತ್ರ ಚರ್ಚೆಯ ವಿಷಯವಾಗುತ್ತಿದೆ. ಆದರೆ ವಾಸ್ತವವಾಗಿ ಆಗಬೇಕಾದದ್ದು ಕನ್ನಡ ಕಲಿಸುವ ಕ್ರಮ ಸರಿಯಾಗಬೇಕು. ಕನ್ನಡ ಭಾಷೆ ಕುರಿತಾಗಿ ಪ್ರಾಯೋಗಿಕ ಕಲಿಕೆ ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಡಾ.ಶಂಕರ ಭಟ್ಟರು ಒಂದು ಸಂಸ್ಥೆ ಮಾಡಬೇಕಾದ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಂಘದ ಅಧ್ಯಕ್ಷ ಎಸ್.ವಿ.ತಿಮ್ಮಯ್ಯ, ಭಾಷೆಯಲ್ಲಿ ಬದಲಾವಣೆ ಏಕಾಏಕಿ ನಡೆಯುವ ಪ್ರಕ್ರಿಯೆಯಲ್ಲ. ಅದು ಸುಧೀರ್ಘವಾದ ಪ್ರಯಾಣ. ಭಾಷೆ ಒಂದೇ ಆದರೂ ಭಾಷೆಯ ಬಳಕೆಯಲ್ಲಿ ವೈವಿಧ್ಯತೆ ಇದೆ.
   ಬದಲಾವಣೆ ಜಗದ ನಿಯಮವಾದರೂ ಬದಲಾವಣೆ ತರುವುದು ಸುಲಭಸಾಧ್ಯವಲ್ಲ. ಈ ನಿಟ್ಟಿನಲ್ಲಿ ಡಾ.ಶಂಕರಭಟ್ಟರ ಸಾಧನೆ ಅಮೋಘವಾದುದು ಎಂದು ಹೇಳಿದರು.
ಗಾಯನ: ಪ್ರಶಸ್ತಿ ಸ್ವೀಕರಿಸಿದ ಡಾ.ಶಂಕರಭಟ್ಟರು ಸಂವಾದದಲ್ಲಿ ಪಾಲ್ಗೊಂಡರು. ಹೆಚ್.ಎಸ್.ನಾಗಭೂಷಣ ಸ್ವಾಗತಿಸಿದರು.
    ವಿಜಯಾ ಶ್ರೀಧರ್ ಪ್ರಸ್ತಾವಿಕವಾಗಿ ಮಾತನಾಡಿದರು. ಡಿ.ಎಸ್.ಮಂಜುನಾಥ್ ನಿರೂಪಿಸಿದರು. ಸಭಾ ಕಾರ್ಯಕ್ರಮಕ್ಕೂ ಮೊದಲು ಪಂ.ಸತೀಶಭಟ್ ಮಾಳಕೊಪ್ಪ ಮತ್ತು ತಂಡದವರಿಂದ ಹಿಂದೂಸ್ಥಾನಿ ಗಾಯನ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement