ಶ್ರೀ ವೀರಾಂಜನೇಯ ಸ್ವಾಮಿ ಜೀರ್ಣೋದ್ಧಾರ
ಶಿವಮೊಗ್ಗ: ಚಿಕ್ಕಪುಟ್ಟ ಸಹಾಯಗಳಿಗೆ ಧನ್ಯವಾದ ಹೇಳುವ ನಾವು, ನಮಗೆ ಸುಂದರ ದೇಹ ನೀಡಿ ಬದುಕನ್ನು ಕಟ್ಟಿಕೊಟ್ಟ ದೇವರಿಗೆ ಎಷ್ಟು ಕೃತಾರ್ಥರಾಗಿದ್ದೇವೆ ಎಂದು ರಾಂಪುರ ಶಿವಯೋಗಿ ಹಾಲಸ್ವಾಮೀಜಿ ಸಂಸ್ಥಾನದ ಪೀಠಾಧ್ಯಕ್ಷ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲ ಸ್ವಾಮೀಜಿ ಪ್ರಶ್ನಿಸಿದರು.
ಭದ್ರಾವತಿ ತಾಲೂಕಿನ ಅರಹತೊಳಲು ಗ್ರಾಮದ ಶ್ರೀ ವೀರಾಂಜನೇಯ ಸ್ವಾಮಿಯ ಜೀರ್ಣೋದ್ಧಾರವಾದ ನೂತನ ದೇವಾಲಯ ಪ್ರವೇಶ ಹಾಗೂ ನೂತನ ಶಿಲಾಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿ ಜನಜಾಗೃತಿ ಧರ್ಮ ಸಭೆಯಲ್ಲಿ ಅವರು ಮಾತನಾಡಿದರು. ಬೆಳಗಿನಿಂದ ಗಂಗಾಪೂಜೆ, ಕುಂಭಾಭಿಷೇಕ, ಜಲಾಭಿಷೇಕ, ಕ್ಷೀರಾಭಿಷೇಕ, ಕುಂಕುಮಾರ್ಚನೆ ಕಾರ್ಯಕ್ರಮ ಮಧ್ಯಾಹ್ನದವರೆಗೆ ನಡೆಯಿತು. ಈ ಸಂದರ್ಭದಲ್ಲಿ ನೂತನ ಶಿಲಾಮೂರ್ತಿ ನಿರ್ಮಿಸಿದ ಶಿಲ್ಪಿಗಳನ್ನು ಸನ್ಮಾನಿಸಲಾಯಿತು.