ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸಂಭ್ರಮದ ಶಂಕರ ಜಯಂತಿ ಆಚರಣೆ

Rashmi Kasaragodu
Updated On : 20 May 2013, 10:50 am

ಕ.ಪ್ರ.ವಾರ್ತೆ, ಭದ್ರಾವತಿ, ಮೇ 19
ಪಟ್ಟಣದ ಜನ್ನಾಪುರದಲ್ಲಿರುವ ಮಹಾಗಣಪತಿ ದೇವಸ್ಥಾನದಲ್ಲಿ ಗಣಪತಿ ಸತ್ಸಂಗ ಮತ್ತು ಶಾರದಾಂಬಾ ಭಜನಾ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಮೇ 11ರಿಂದ 15ರ ವರೆಗೆ ಶಂಕರ ಭಗವತ್ಪಾದರ ಜಯಂತಿಯನ್ನು ವಿಜೃಂಭಣೆಯಿಂದ ಅಚರಿಸಲಾಯಿತು.
 ಪ್ರತಿದಿನ ಸಂಜೆ ಮಹಿಳೆಯರಿಂದ ಶಂಕರ ವಿರಚಿತ ಸ್ತೋತ್ರ ಪಾರಾಯಣ ಮತ್ತು ಶಂಕರಾಚಾರ್ಯರ ಕುರಿತು ಉಪನ್ಯಾಸ ನಡೆಯಿತು. ಎನ್.ಎಸ್. ಕೃಷ್ಣಮೂರ್ತಿ ಸೋಮಯಾಜಿ ಶಂಕರ ಸ್ತೋತ್ರ ವೈಭವ ಕುರಿತು ಉಪನ್ಯಾಸ ನೀಡಿದರೆ ಶ್ರೀಕರ ಸೋಮಯಾಜಿ, ಎಚ್.ಎಂ. ರಮೇಶ್, ಓಂಕಾರಪ್ಪ, ಚಂದ್ರಪ್ಪ ಗುರೂಜಿ ಮೊದಲಾದವರು ಕ್ರಮವಾಗಿ ಅಧ್ಯಾತ್ಮ ವಿಚಾರ, ಭಜಗೋವಿಂದಂ ಸ್ತೋತ್ರ, ಶಂಕರರ ಜೀವನ ಚರಿತ್ರೆ, ಸನಾತನ ಧರ್ಮ ಮುಂತಾದ ವಿಷಯಗಳ ಬಗ್ಗೆ ಮಾತನಾಡಿದರು.
 ಸೌಂದರ್ಯ ಲಹರಿ ಪ್ರಧಾನ ಸಂಚಾಲಕ ಕೃಷ್ಣಮೂರ್ತಿ ಸೋಮಯಾಜಿ ಮತ್ತು ಮಹಿಳಾ ಸಂಚಾಲಕಿ ಉಷಾದೇವಿ ಶ್ರೀನಿವಾಸಮೂರ್ತಿ, ಮಹಾಗಣಪತಿ ದೇವಸ್ಥಾನದ ಅಧ್ಯಕ್ಷ ಬಿ.ಜೆ. ಮರಿಯಪ್ಪ ಮತ್ತಿತರ ಟ್ರಸ್ಟಿಗಳು ಹಾಜರಿದ್ದು ಶಂಕರ ಜಯಂತಿಯನ್ನು ಯಶಸ್ವಿಗೊಳಿಸಿದರು.
    ಮೇ.15ರ ಬುಧವಾರದಂದು ಶ್ರೀ ಶಂಕರ ಭಗವತ್ಪಾದರ ಭಾವಚಿತ್ರದೊಂದಿಗೆ ರಾಜಬೀದಿ ಮೆರವಣಿಗೆ ನಡೆಸಲಾಯಿತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement