ಕ್ರಿಕೆಟ್ ಬೆಟ್ಟಿಂಗ್: ಆರೋಪಿ ಬಂಧನ
ಕ.ಪ್ರ.ವಾರ್ತ್ಣೆ ದಾವಣಗೆರ್ಣೆ ಮೇ 20
ರಾಜಸ್ಥಾನ ರಾಯಲ್ಸ್ ಮತ್ತು ಸನ್‌ರೈಸರ್ಸ್ ತಂಡಗಳ ಮಧ್ಯೆ ನಡೆಯುತ್ತಿದ್ದ ಐಪಿಎಲ್ ಟ್ವೆಂಟಿ- 20 ಪಂದ್ಯದ ವೇಳೆ ಬೆಟ್ಟಿಂಗ್ ಹಣ ಸಂಗ್ರಹಿಸಿ, ಜೂಜಾಡುತ್ತಿದ್ದ ಆರೋಪಿಯನ್ನು ಬಂಧಿಸಿ, ಆತನಿಂದ 4,380 ರು ನಗದು, ಮೊಬೈಲ್, ಟಿವಿ ಹಾಗೂ ಬೆಟ್ಟಿಂಗ್‌ಗೆ ಬರೆದುಕೊಂಡಿದ್ದ 2 ಚೀಟಿಗಳನ್ನು ಜಪ್ತು ಮಾಡುವಲ್ಲಿ ಜಿಲ್ಲಾ ಅಪರಾಧ ಪತ್ತೆ ದಳದ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ನಗರದ ಕೊಂಡಜ್ಜಿ ರಸ್ತೆಯ ವೀರಾಂಜನೇಯ ಟ್ರೇಡರ್ಸ್‌ನಲ್ಲಿ ವ್ಯಕ್ತಿಯೊಬ್ಬ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿ, ಹಣ ಸಂಗ್ರಹಿಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಆದರಿಸಿ ಡಿಸಿಐಬಿ ಇನ್ಸಪೆಕ್ಟರ್ ಎಂ.ಜಿ. ತಿಪ್ಪೇಸ್ವಾಮಿ ಹಾಗೂ ಸಿಬ್ಬಂದಿ ದಾಳಿ ನಡೆಸಿದರು. ದಾಳಿ ವೇಳೆ ಆವರಗೊಳ್ಳ ಗ್ರಾಮದ ಕೆ.ಡಿ. ಗಣೇಶ ಎಂಬಾತನನ್ನು ಬಂಧಿಸಲಾಯಿತು.
ಸಾರ್ವಜನಿಕರಿಗೆ ವಂಚನೆ: ವೀರಾಂಜನೇಯ ಟ್ರೇಡರ್ಸ್‌ನಲ್ಲಿ ಗಣೇಶನ ಮೊಬೈಲ್‌ಗೆ ಕೆಲವರು ಕರೆ ಮಾಡಿ, ಟ್ವೆಂಟಿ- 20 ಕ್ರಿಕೆಟ್ ಪಂದ್ಯದಲ್ಲಿ ಎರಡೂ ತಂಡಗಳ ಪರ, ವಿರುಪ್ಧವಾಗಿ ಪಣ ಕಟ್ಟುತ್ತಿದ್ದರು.
ಮೊಬೈಲ್‌ನಲ್ಲಿ ಆರೋಪಿಯು ಇದು ಅದೃಷ್ಟದ ಆಟ, ನಿಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳಿ, ಗೆದ್ದರೆ 1 ಸಾವಿರ, ರಾಜಸ್ಥಾನ ಗೆದ್ದರೆ 1500 ರು.ನಂತೆ ಹೇಳುತ್ತಾ, ಗಿರಾಕಿಗಳನ್ನು ಪ್ರೋತ್ಸಾಹಿಸಿ, ಮೋಸ ಮಾಡುತ್ತಾ ಹಣ ಸಂಗ್ರಹಿಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದರು. ಅಂಗಡಿಯಲ್ಲಿ ಟಿವಿ ಮುಂದೆ ಕುಳಿತಿದ್ದ ಆರೋಪಿ ತನ್ನ ಮೊಬೈಲ್‌ನಲ್ಲಿ ಕರೆ ಮಾಡುತ್ತಾ, ಗಿರಾಕಿಗಳಿಂದ ಹಣ ಸಂಗ್ರಹಿಸುತ್ತಿದ್ದ.
ಆರೋಪಿಯಿಂದ ಮೊಬೈಲ್, ಟಿವಿ, ಬೆಟ್ಟಿಂಗ್ ಬಗ್ಗೆ ಬರೆದು ಕೊಂಡಿದ್ದ 2 ಚೀಟಿ ಜಪ್ತು ಮಾಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.