ನಾಳೆ ದೇಗುಲ ಉದ್ಘಾಟನೆ
ಸೊರಬ: ತಾಲೂಕು ಚಿಕ್ಕಬ್ಬೂರು ಗ್ರಾಮದಲ್ಲಿ ಮೇ 22ರಂದು ವೀರಭದ್ರ ದೇವರ ಪ್ರತಿಷ್ಠಾಪನೆ, ದೇಗುಲ ಉದ್ಘಾಟನಾ ಸಮಾರಂಭ ನೆರವೇರಲಿದೆ.
ಅಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಶ್ರೀಗಳು ಆಗಮಿಸಲಿದ್ದಾರೆ. ಧಾರ್ಮಿಕ ವಿಧಿವಿಧಾನಗಳು, ಅಡ್ಡ ಪಲ್ಲಕ್ಕಿ ಉತ್ಸವ ಮುಂತಾದ ಕಾರ್ಯಕ್ರಮ ಜರುಗಲಿದೆ. ಜಡೆ, ಶಾಂತಾಪುರ, ತೊಗರ್ಸಿ, ಹಿರೇಮಾಗಡಿ, ಮಳಲಿ ಶ್ರೀಗಳು ಉಪಸ್ಥಿತರಿರುತ್ತಾರೆ ಎಂದು ದೇಗಲು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.