ಮನವಿಗೆ ಸ್ಪಂದಿಸಿದ ಅಧಿಕಾರಿಗಳು
ಸೊರಬ: ಇಲ್ಲಿನ ಸಾರ್ವಜನಿಕ ಹಿತರಕ್ಷಣಾ ವೇದಿಕೆ ಪಟ್ಟಣದ ಮುಖ್ಯರಸ್ತೆ ದುರಸ್ತಿಗೆ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಪಂಧಿಸಿದ್ದು, ರಸ್ತೆ ದುರಸ್ತಿ ನಡೆಯುತ್ತಿದೆ.
ಮುಖ್ಯ ರಸ್ತೆ ಅಗಲೀಕರಣದ ಹಿನ್ನೆಲೆಯಲ್ಲಿ ಕಾನೂನು ತೊಡಕಿನಿಂದಾಗಿ ನೆನೆಗುದಿ ಬಿದ್ದಿದ್ದ ರಸ್ತೆ ಅಭಿವೃದ್ಧಿ ಹಿನ್ನಡೆಯಿಂದಾಗಿ ಇದೇ ತಿಂಗಳು ನಡೆಯಲಿರುವ ಪಟ್ಟಣದ ರಂಗನಾಥ ದೇಗುಲದ ರಥೋತ್ಸವಕ್ಕೆ ರಸ್ತೆ ಯೋಗ್ಯವಾಗಿಲ್ಲ ಎಂದು ಕಾರಣ ನೀಡಿ ಶೀಘ್ರ ದುರಸ್ತಿಗಾಗಿ ಪ್ರತಿಭಟನೆ ಮೂಲಕ ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿರುವ ಇಲಾಖೆಗೆ ವೇದಿಕೆಯಿಂದ ಜೆ.ಎಸ್. ಚಿದಾನಂದಗೌಡ ಹಾಗೂ ಪುರ ನಾಗರಿಕರನೇಕರು ಕೃತಜ್ಞತೆ ಸಲ್ಲಿಸಿದ್ದಾರೆ.