ಯುವಜನ ಒಕ್ಕೂಟ ಪ್ರತಿಭಟನೆ
ಕ.ಪ್ರ. ವಾರ್ತ್ಣೆ ಮೊಳಕಾಲ್ಮುರ್ಣು ಮೇ 20
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಯುವ ಜನ ಒಕ್ಕೂಟದಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಇಲ್ಲಿನ ಕೆಇಬಿ ವೃತ್ತದಿಂದ ಆಗಮಿಸಿದ ಪ್ರತಿಭಟನಾಕಾರರು ತಾಲೂಕು ಕಚೇರಿ ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಸತತ 4 ವರ್ಷಗಳ ಭೀಕರ ಬರಗಾಲಕ್ಕೆ ತುತ್ತಾಗಿರುವ ಈ ಪ್ರದೇಶದಲ್ಲಿ ಜನರಿಗೆ ಮಾಡಲು ಉದ್ಯೋಗವಿಲ್ಲದೇ ಸಾವಿರಾರು ಕುಟುಂಬಗಳು ವಲಸೆ ಹೋಗುವಂತಾಗಿದೆ. ಸರ್ಕಾರದ ಉದ್ಯೋಗ ಖಾತ್ರಿ ಯೋಜನೆ ನಿಜವಾದ ಫಲಾನುಭವಿಗಳಿಗೆ ದೊರಕದೇ ಗುತ್ತಿಗೆದಾರರ ಪಾಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ನೀರಿನ ಸಮಸ್ಯೆ: ಅಂತರ್ಜಲ ಕುಸಿತದ ಪರಿಣಾಮ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದೆ.
ಶುದ್ಧ ಕುಡಿಯುವ ನೀರಿಲ್ಲದೇ ಫ್ಲೋರೈಡ್‌ಯುಕ್ತ ನೀರನ್ನೇ ಸೇವಿಸಿ ರೋಗಕ್ಕೆ ತುತ್ತಾಗುತ್ತಿದ್ದಾರೆ ಎಂದು ಒತ್ತಾಯಿಸಿದರು.
ಕಳೆದ ಬಾರಿಯ ಭೀಕರತೆಯ ಪರಿಣಾಮ ರೈತರಲ್ಲಿ ಮೇವಿನ ಕೊರತೆ ಬಾಧಿಸುತ್ತಿದ್ದು, ಜಾನುವಾರುಗಳಿಗೆ ಮೇವಿಲ್ಲದೇ ಕಸಾಯಿ ಖಾನೆಗೆ ದೂಡುವಂತಾಗಿದೆ. ಈಗಾಗಲೇ ಜಿಲ್ಲಾಡಳಿತದ ಆದೇಶದಂತೆ ತಾಲೂಕಿನ ಪ್ರತಿಯೊಂದು ಗ್ರಾಪಂ ನಿವೇಶನ ರಹಿತರನ್ನು ಗುರುತಿಸಿದ್ದು, ಇಲ್ಲಿಯ ತನಕ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡುವಲ್ಲಿ ವಿಳಂಬವಾಗಿದೆ.
ಮುಂದಿನ ಜೂನ್ ಅಥವಾ ಜುಲೈ ತಿಂಗಳು ಈ ಭಾಗದ ರೈತರು ಬಿತ್ತನೆಗೆ ಯೋಗ್ಯವಾಗಿದ್ದು, ಬಿತ್ತನೆ ಬೀಜಕ್ಕೆ ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಸರ್ಕಾರ ಶೇಂಗಾ ಬೀಜವನ್ನು ವಿತರಣೆ ಮಾಡಬೇಕೆಂದು ಒತ್ತಾಯಿಸಿ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು. ಜಿಲ್ಲಾಧ್ಯಕ್ಷ ಜಾಫರ್ ಶರೀಫ್ , ನಾಗೇಂದ್ರಪ್ಪ , ಖಾಜಾ ಹುಸೇನ್, ಈರಣ್ಣ, ಮಲ್ಲಿಕಾರ್ಜುನ , ಶಬ್ಬೀರ್ ಆಹ್ಮದ್, ಪ್ರಕಾಶ್, ಬೋರಯ್ಯ, ತಿಪ್ಪೇಸ್ವಾಮಿ, ಓಬಣ್ಣ, ಮೊದಲಾದವರು ಪಾಲ್ಗೊಂಡಿದ್ದರು.