ವೈಭವದ ವಾಸವಿ ಜಯಂತಿ ಆಚರಣೆ
ಶಿರಾಳಕೊಪ್ಪ ಮೇ 20 ಇಲ್ಲಿನ ಆರ್ಯವೈಶ್ಯ ಸಮಾಜದ ಆಶ್ರಯದಲ್ಲಿ ಸೋಮವಾರ ವಾಸವಿ ಜಯಂತಿ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಪಟ್ಟಣದಲ್ಲಿ ಜಯಂತಿ ಆಚರಣೆ ಅಂಗವಾಗಿ ಬೆಳಗ್ಗೆಯಿಂದಲೇ ಪಟ್ಟಣದ ಎಲ್ಲಾ ವ್ಯಾಪಾರಿಗಳು ಅಂಗಡಿ ಮುಂಗಟ್ಟು ಬಂದ್ ಮಾಡಿದ್ದರು. ಬೆಳಗ್ಗೆ ನಡೆದ ಕಳಸ ಪ್ರತಿಷ್ಠಾಪನೆ ಮೊದಲು ಮೆರವಣಿಗೆಯಲ್ಲಿ ಕಳಸ ಹೊತ್ತ ಮಹಿಳೆಯನ್ನು ಸಮಾಜ ಬಾಂಧವರು ಮನೆಮುಂದೆ ಪಾದ ತೊಳೆದು ಪೂಜೆ ಸಲ್ಲಿಸಿದರು. ನಂತರ ಸಮಾಜದ ಆಶ್ರಯದಲ್ಲಿ ದೇವಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
ನಂತರ ರಾತ್ರಿ ಸಮಾಜದ ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲಾ ಬಾಂಧವರು ವಾಸವಿ ದೇವಿಯನ್ನು ವಾದ್ಯಗಳೊಂದಿಗೆ ಮೆರವಣಿಗೆ ಮಾಡಿದರು. ಮೆರವಣಿಗೆ ಬರುವ ಮಾರ್ಗದಲ್ಲಿ ಪಟ್ಟಣದ ನಾಗರಿಕರು ನೀರು ರಂಗವಲ್ಲಿ ಹಾಕಿ ಮೆರವಣಿಗೆ ಬರಮಾಡಿಕೊಂಡರು.
ನಿರಂತರ ವ್ಯಾಪಾರ ಹಾಗೂ ಕೆಲಸ ಕಾರ್ಯಗಳಲ್ಲಿ ಮಗ್ನರಾಗಿರುವ ವೈಶ್ಯ ಸಮಾಜದ ಎಲ್ಲ ಬಾಂಧವರು ಜಯಂತಿಯ ಅಂಗವಾಗಿ ಒಂದೇ ಕಡೆಯಲ್ಲಿ ಉಪಹಾರ ಊಟ ಮಾಡಿ ಪರಸ್ಪರ ಸಂತಸ ಹಂಚೊಕಂಡು ಸಂತೋಷಪಟ್ಟರು.