ಸೋಗಾನೆ ರೈತ ರಘು ಇಸ್ರೇಲ್ಗೆ
ಶಿವಮೊಗ್ಗ: ಶಿವಮೊಗ್ಗ ಹೊರ ವಲಯದ ಸೋಗಾನೆಯ ಪ್ರತಿಭಾನ್ವಿತ ಕೃಷಿಕ ಜಿ.ಎಂ.ರಘು ಅವರು ಇಸ್ರೇಲ್ಗೆ ಹೊರಟು ನಿಂತಿದ್ದಾರೆ.
ತೋಟಗಾರಿಕಾ ಕ್ಷೇತ್ರದಲ್ಲಿ ಸಾಧನೆಗೈದು ತೋಟಗಾರಿಕೆ ಬೆಳೆಯ ನಾನಾ ಹೊಸ ಆವಿಷ್ಕಾರಗಳ ಬಗ್ಗೆ ಮತ್ತಷ್ಟು ಅರಿವು ಪಡೆಯಲು ತೋಟಗಾರಿಕೆ ಇಲಾಖೆಯು ರಘು ಅವರನ್ನು ಇಸ್ರೇಲ್ಗೆ ತೆರಳಲು ಆಯ್ಕೆ ಮಾಡಿ ಕಳುಹಿಸಿದೆ. ಪ್ರಸಕ್ತ ಸಾಲಿನ ರಾಜ್ಯ ಪ್ರಶಸ್ತಿ ಪುರಸ್ಕೃತ ರೈತರನ್ನು ಇಸ್ರೇಲ್ಗೆ ಕಳುಹಿಸುತ್ತಿದ್ದು, ಜಿಲ್ಲೆಯಿಂದ ಏಕೈಕ ತೋಟಗಾರಿಕಾ ರೈತನಾಗಿ ರಘು ಆಯ್ಕೆಯಾಗಿದ್ದಾರೆ. ರಾಜ್ಯದಿಂದ ಒಟ್ಟು 12 ರೈತರು ಮೇ 20 ರಂದು ಬೆಂಗಳೂರಿನಿಂದ ಇಸ್ರೇಲ್ಗೆ ಪ್ರವಾಸ ಬೆಳೆಸಿದ್ದಾರೆ.
ತೋಟಗಾರಿಕೆ ಇಲಾಖೆ ಈ ಯುವ ಉತ್ಸಾಹಿ ಕೃಷಿಕನ ಸಾಧನೆಯನ್ನು ಶ್ಲಾಘಿಸಿದ್ದು, ಪ್ರವಾಸಕ್ಕೆ ಶುಭ ಹಾರೈಸಿದೆ.