ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ತವರಲ್ಲಿ ಸಚಿವರಿಗೆ ಅದ್ಧೂರಿ ಸ್ವಾಗತ

Rashmi Kasaragodu
Updated On : 22 May 2013, 11:24 am

ತೀರ್ಥಹಳ್ಳಿ: ಕ್ಷೇತ್ರದಿಂದ ಗೆದ್ದು ಸಚಿವರಾಗುವ ಮೂಲಕ ಕ್ಷೇತ್ರಕ್ಕೆ ಘನತೆ ತಂದುಕೊಟ್ಟ ಕಿಮ್ಮನೆ ರತ್ನಾಕರ ಅವರ ತೀರ್ಥಹಳ್ಳಿ ಪುರಪ್ರವೇಶ ಅದ್ದೂರಿಯಾಗಿ ನೆರವೇರಿತು.
 ಪಟ್ಟಣದ ಮುಖ್ಯ ಬಿದಿಯಲ್ಲಿ ತೆರೆದ ವಾಹನದಲ್ಲಿ ಪಟಾಕಿ ಸದ್ದಿನೊಡನೆ ಕಿಮ್ಮನೆ ಮಧ್ಯಾಹ್ನ 2 ಘಂಟೆಗೆ ಆಗಮಿಸಿದರು. ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಬರುವ ಮಾರ್ಗಮಧ್ಯದಲ್ಲಿ ಜನ ಕಾತರದಿಂದ ಕಾಯುತ್ತಿದ್ದು, ಕಿಮ್ಮನೆಯನ್ನು ಕಂಡು  ಹರ್ಷ ವ್ಯಕ್ತಪಡಿಸಿದರು.
 ಸಂಸ್ಕೃತಿ ಮಂದಿರದ ಆವರಣದಲ್ಲಿ  ಹಾಕಿದ್ದ ಬೃಹತ್ ಪೆಂಡಾಲಿನಲ್ಲಿ ನೆಡೆದ ಅಭಿನಂದನಾ ಸಭೆಯಲ್ಲಿ ನಿಯೋಜಿತ ಸ್ಪೀಕರ್ ಕಾಗೋಡು ತಿಮ್ಮಪ್ಪ, ಕಿಪಿಸಿಸಿ ಸದಸ್ಯ ಕಡ್ತೂರು ದಿನೇಶ್, ಮಾಜಿ ಶಾಸಕರು, ಜಿಲ್ಲಾ ಮತ್ತು ತಾಪಂ ಸದಸ್ಯರು, ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಮುಖಂಡರು ರಾರಾಜಿಸಿದ್ದರು.
 ಶಿಕ್ಷಣ ಕ್ಷೇತ್ರ ಬಿಜೆಪಿ ಆಳ್ವಿಕೆಯಲ್ಲಿ ಹದಗೆಟ್ಟಿತ್ತು. ಅದನ್ನು ಬದಲಾಯಿಸುವ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಅಂಟಿದ ಕಳಂಕ ತೊಳೆಯಬೇಕಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕ್ಷೇತ್ರದ ಜನತೆಯ ಅಭಿನಂದನೆಗೆ ಮಾರುಹೋದ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ  ಪರಿಣಾಮಕಾರಿ ಬದಲಾವಣೆ ತರುವ ಹೆಬ್ಬಯಕೆ ಹೊಂದಿರುವುದಾಗಿ, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಖುದ್ದು ಸಂಚರಿಸಿ, ಆ ಭಾಗದ ಶೈಕ್ಷಣಿಕ ಅಗತ್ಯಗಳ ಬಗ್ಗೆ  ಅಧ್ಯಯನದ ವರದಿ ನೀಡಲು ಅಧಿಕಾರಿಗಳಿಗೆ ಈಗಾಗಲೇ ತಿಳಿಸಲಾಗಿದೆ.   ಹಿಂದಿನ ಶಿಕ್ಷಣ ಸಚಿವರು, ಶಿಕ್ಷಣ ತಜ್ಞರೊಂದಿಗೆ ಸಮಾಲೋಚಿಸುವ ಮೂಲಕ  ಈ ವರದಿಗಳ ಆಧಾರದ ಮೇಲೆ ಒಂದಿಷ್ಟು ಬದಲಾವಣೆ ತರಲು ಉದ್ದೇಶಿಸಿದ್ದೇನೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement