ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ದ್ಯಾವಿನಕೆರೆ ಜಾತ್ರಾ ಮಹೋತ್ಸವ

Rashmi Kasaragodu
Updated On : 22 May 2013, 11:24 am

ಶಿವಮೊಗ್ಗ: ಆಯನೂರಿನ ಸಮೀಪದಲ್ಲಿರುವ ದ್ಯಾವಿನಕೆರೆಯ ಶ್ರೀ ಸಿದ್ದೇಶ್ವರ ಸ್ವಾಮಿ ಮತ್ತು ಶ್ರೀ ಆದಿಶಕ್ತಿ ಚೌಡೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವ ಮೇ 20ರಿಂದ ಆರಂಭವಾಗಿದ್ದು, 26ವರೆಗೆ ನಡೆಯಲಿದೆ. 22ರಂದು ಬೆಳಗ್ಗೆ 7ಗಂಟೆಗೆ ನೇತ್ರೋನ್ಮಿಲನ ಹೋಮ, ಪ್ರತಿಷ್ಠಾನ ದೇವತಾ ಮೂಲಮಂತ್ರ ನ್ಯಾಸ ಹೋಮ, ಶಾಂತಿಕ, ಪೌಷ್ಟಿಕ ಹೋಮಗಳು, ಪ್ರತಿಷ್ಠಾಂಗ ಹೋಮ, ಪಿಂಡಿಕಾ ದೇವತಾ ಸ್ಥಾಪನಾ ಪೂಜೆ. ನಂತರ ಸಭಾ ಕಾರ್ಯಕ್ರಮ ನಡೆಯಲಿದ್ದು, ಚನ್ನಗಿರಿ ತಾಲೂಕಿನ ವಿರಕ್ತಮಠದ ಶ್ರೀ ಗುರುಬಸವ ಸ್ವಾಮೀಜಿ ಮತ್ತು ಚೌಕಿಮಠದ ಶ್ರೀ ನೀಲಕಂಠ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ನಡೆಯಲಿದೆ. 23ರಂದು ಕಳಶಾಭಿಷೇಕ, ಗೋಪುರ ಕಳಸ ಪ್ರತಿಷ್ಠಾಪನೆ ನಂತರ ಧರ್ಮಸಭೆ ಇದ್ದು, ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಶ್ರೀ ಮ.ನಿ.ಪ್ರ. ರೇವಣ್ಣಸಿದ್ದ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯಲಿದೆ. 24ರಂದು ಸಾಮೂಹಿಕ ಸತ್ಯನಾರಾಯಣ ಪೂಜೆ, 25ರಂದು ಶ್ರೀ ಸ್ವಾಮಿಯ ರಥಾರೋಹಣ, 26ರಂದು ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.
ಅಭಿನಂದನೆ
ಶಿವಮೊಗ್ಗ: ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ನೌಕರರ ಒಕ್ಕೂಟವು ನೂತನವಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿ ಆಯ್ಕೆಯಾದ ಸಚಿವ ಕಿಮ್ಮನೆ ರತ್ನಾಕರ್ ಮತ್ತು ಶಿವಮೊಗ್ಗ ಶಾಸಕ ಪ್ರಸನ್ನ ಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಿದೆ. ನೌಕರರ ವೇತನ ತಾರತಮ್ಯ, ಕಾಲ್ಪನಿಕ ವೇತನ ಬಡ್ತಿ, ಉಪನ್ಯಾಸಕರ, ಪ್ರಾಂಶುಪಾಲರ ಪ್ರತ್ಯೇಕ ವೇತನ ಶ್ರೇಣಿ, ಶೈಕ್ಷಣಿಕ ಅಭಿವೃದ್ಧಿಗಾಗಿ ಹೋರಾಟ ನಡೆಸುತ್ತಿದ್ದು, ಶಿಕ್ಷಣ ಮಂತ್ರಿಗಳು ಸಮಸ್ಯೆಯನ್ನು ಬಗೆಹರಿಸುವಂತೆ ಕ್ರಮಕೈಗೊಳ್ಳಬೇಕು ಎಂದು ಒಕ್ಕೂಟ ಒತ್ತಾಯಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement