ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಶಿವಮೊಗ್ಗದಲ್ಲಿ ಉತ್ತಮ ಆಡಳಿತದ ಜಾಗೃತಿ ಜಾಥಾ

Rashmi Kasaragodu
Updated On : 22 May 2013, 11:24 am

ಶಿವಮೊಗ್ಗ: ಮಾರಶೆಟ್ಟಿಹಳ್ಳಿ ಗ್ರಾಪಂನಲ್ಲಿ ಭದ್ರಾವತಿಯ ಮಲ್ನಾಡ್ ಸಮಾಜ ಸೇವಾ ಸಂಸ್ಥೆಯವರು ಉತ್ತಮ ಆಡಳಿತದ ನಿರ್ವಹಣಾ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ  ಮಲ್ನಾಡ್ ಸಮಾಜ ಸೇವಾ ಸಂಸ್ಥೆ ನಿರ್ದೇಶಕ ವಿನೋದ್ ಮಾತನಾಡಿ, ಒಂದು ಗ್ರಾಪಂ ಜನರಿಗೆ ಇರುವ ಸ್ಥಳೀಯ ಸರ್ಕಾರ. ಗ್ರಾಪಂ ವ್ಯಾಪ್ತಿಯಲ್ಲಿ ನಡೆಯುವ ಕೆಲಸ ಕಾರ್ಯಗಳ ಬಗ್ಗೆ ಪ್ರತಿಯೊಬ್ಬರು ಮಾಹಿತಿ ಪಡೆಯುವ ಹಕ್ಕನ್ನು ಹೊಂದಿದ್ದಾರೆ ಎಂದು ತಿಳಿಸಿದರು.
 ನಂತರ ಗ್ರಾಪಂನಿಂದ ಮಾರಶೆಟ್ಟಿಹಳ್ಳಿ ಸರ್ಕಲ್ ವರೆಗೆ ಜಾಥಾ ಕಾರ್ಯಕ್ರಮದ ಮುಖಾಂತರ ಜನರಿಗೆ ಉತ್ತಮ ಆಡಳಿತ ನಿರ್ವಹಣೆ ಬಗ್ಗೆ ಅರಿವು ಮೂಡಿಸಲಾಯಿತು. ಇದರಲ್ಲಿ ಸ್ಥಳೀಯ ಮಹಿಳೆಯರು, ಸ್ವಸಹಾಯ ಸಂಘದ ಸದಸ್ಯರು ಯುವಕ ಸಂಘದ ಸದಸ್ಯರು, ಗ್ರಾಪಂ ಅಧ್ಯಕ್ಷರು ಮತ್ತು ಸದಸ್ಯರು ಪಾಲ್ಗೊಂಡಿದ್ದರು.
 ವೇದಿಕೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾರಶೆಟ್ಟಿಹಳ್ಳಿ ಗ್ರಾಪಂ ಅಧ್ಯಕ್ಷ ಶ್ರೀನಿವಾಸ್, ನಮ್ಮೂರ ನಾಗರಿಕ ವೇದಿಕೆಯ ಅಧ್ಯಕ್ಷ ದೇವೇಂದ್ರ ರಾವ್, ಗ್ರಾಪಂ ಸದಸ್ಯ ರಂಗನಾಥ್ ಹಾಗೂ ಷಣ್ಮುಗಪ್ಪ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement