ಶಿಶಿಕ್ಷು ತರಬೇತಿಗೆಅರ್ಜಿ ಆಹ್ವಾನ
ಶಿವಮೊಗ್ಗ: ಬೆಂಗಳೂರಿನ ಐಎಸ್‌ಆರ್‌ಓ ಸೆಟಲೈಟ್ ಕೇಂದ್ರದಲ್ಲಿ ಶಿಶಿಕ್ಷು ತರಬೇತಿ ನೀಡಲು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ಎಸ್‌ಎಸ್‌ಎಲ್‌ಸಿ ಮತ್ತು ಸಂಬಂಧಿತ ಐಟಿಐ ವೃತ್ತಿಯಲ್ಲಿ ಪಾಸಗಿರುವ, ಸಾಮಾನ್ಯ(35 ವರ್ಷ ) ಮತ್ತು ಪರಿಶಿಷ್ಟ ಜಾತಿ, ವರ್ಗ (40 ವರ್ಷ) ವಯೋವುತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಸಕ್ತರು ನಿಗದಿತ ಅರ್ಜಿಯನ್ನು ಪಡೆದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಬೆಂಗಳೂರು- 560009 ಇಲ್ಲಿಗೆ ಮೇ 25ರೊಳಗೆ ಸಲ್ಲಿಸಬಹುದು. ಮಾಹಿತಿಗಾಗಿ ಶಿವಮೊಗ್ಗದ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಸಂಪರ್ಕಿಸಬಹುದು. ವಿವರಗಳಿಗಾಗಿ- 08182-255293.