ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಹಲಸು ಬೆಳೆಸು ಅಭಿಯಾನ 2013

Rashmi Kasaragodu
Updated On : 22 May 2013, 11:27 am

ಸಾಗರ: ಹೆಗ್ಗೋಡಿನ ಬಾಲನಂದನ ಟ್ರಸ್ಟ್‌ನಿಂದ ಹಲಸು ಬೆಳೆಸು ಅಭಿಯಾನ 2013 ಕಾರ್ಯಕ್ರಮ 23ರಂದು ಬೆಳಿಗ್ಗೆ 10-30ರಿಂದ ಪಟ್ಟಣದ ಸೇವಾಸಾಗರ ಶಾಲೆಯ ಅಜಿತ ಸಭಾಭವನದಲ್ಲಿ ನಡೆಯಲಿದೆ. ರಂಗನಾಥ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಶಿವಮೊಗ್ಗ ನವಿಲೆ ಕೃಷಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಎಸ್. ಜಯಶ್ರೀ, ಡಾ.ಟಿ.ಜೆ. ಲಕ್ಷ್ಮೀನಾರಾಯಣ ಪಾಲ್ಗೊಳ್ಳಲಿದ್ದಾರೆ.  ಬೆಳಿಗ್ಗೆ 11ಕ್ಕೆ ನಡೆಯುವ ತಾಂತ್ರಿಕ ಗೋಷ್ಠಿಯಲ್ಲಿ ಹಲಸು ಮೌಲ್ಯವರ್ಧನೆ, ಹಲಸು ಉತ್ಪನ್ನಗಳ ಕುರಿತು ಡಾ. ಜಯಶ್ರೀ, ನಾಗೇಂದ್ರ ಸಾಗರ್ ಹಾಗೂ ವಾಣಿಶ್ರೀ ಸಾಗರ್ ಉಪನ್ಯಾಸ ನೀಡಲಿದ್ದು, 12-30ಕ್ಕೆ ನಡೆಯುವ ಸಂವಾದ ಕಾರ್ಯಕ್ರಮದಲ್ಲಿ ಡಾ.ಟಿ.ಜೆ. ಲಕ್ಷ್ಮೀನಾರಾಯಣ, ಕಸಿ ತಜ್ಞ ಅನಂತಮೂರ್ತಿ ಜವಳಿ, ನಿವೃತ್ತ ತೋಟಗಾರಿಕೆ ಅಧಿಕಾರಿ ಎಚ್. ಕೃಷ್ಣಪ್ಪ ಪಾಲ್ಗೊಳ್ಳಲಿದ್ದಾರೆ.  ಮಧ್ಯಾಹ್ನ 3ಕ್ಕೆ ನಡೆಯುವ ಹಲಸು ತಿನಿಸು ತಯಾರಿಕೆ ಕಾರ್ಯಕ್ರಮವನ್ನು ತಹಸೀಲ್ದಾರ್ ಆರ್. ರಾಜಣ್ಣ ಉದ್ಘಾಟಿಸಲಿದ್ದಾರೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement