ಎಸ್ಸೆಸ್ಸೆಲ್ಸಿ, ಪಿಯುಸಿ ಪ್ರತಿಭಾವಂತರು
ಜೋಗ್‌ಫಾಲ್ಸ್: ಇಲ್ಲಿನ ಕರ್ನಾಟಕ ವಿದ್ಯುತ್ ನಿಗಮ ನಿಯಮಿತದಲ್ಲಿ ಉದ್ಯೋಗಿಯಾಗಿರುವ ಕೆ.ಸಿ.ಕೃಷ್ಣಕುಮಾರ್ರ್‌ವರ ಪುತ್ರಿ ಭಾರ್ಗವಿ.ಕೆ ಎಸ್‌ಎಸ್‌ಎಲ್‌ಸಿಯಲ್ಲಿ ಶೇ 97.12 ಅಂಕಗಳನ್ನು ಗಳಿಸುವ ಮೂಲಕ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಳಾಗಿರುತ್ತಾಳೆ.
ಇವರು ಸುಳ್ಯದ ಚೊಕ್ಕಾಡಿಯ ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಯಲ್ಲಿ ಅಭ್ಯಸಿಸಿದ್ದು, ಸುಳ್ಯ ತಾಲೂಕಿಗೆ ಪ್ರಥಮ ಸ್ಥಾನವನ್ನು ಪಡೆದಿರುತ್ತಾಳೆ. ಕನ್ನಡದಲ್ಲಿ 124 ಅಂಕ, ಇಂಗ್ಲೀಷ್, ಗಣಿತ, ಸಮಾಜ ವಿಜ್ಞಾನದಲ್ಲಿ 99 ಅಂಕಗಳನ್ನು ಗಳಿಸಿರುತ್ತಾಳೆ.
ವೆರ್ಣೇಕರ್‌ಗೆ ಶೇ. 95.66
ಇಲ್ಲಿನ ಕರ್ನಾಟಕ ವಿದ್ಯುತ್ ನಿಗಮ ನಿಯಮಿತದಲ್ಲಿ ಕಾರ್ಯನಿರ್ವಾಹಕ ಅಭಿಯಂತರರಾಗಿರುವ ಆರ್.ವಿ.ವೆರ್ಣೇಕರ್ ಅವರ ಪುತ್ರ ಅಶ್ವಿನ್.ಆರ್.ವೆರ್ಣೇಕರ್ ಪಿಯುಸಿಯಲ್ಲಿ ಶೇ. 95.66 ಅಂಕಗಳನ್ನು ಗಳಿಸುವ ಮೂಲಕ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣನಾಗಿದ್ದಾನೆ. ಈತ ಭೌತಶಾಸ್ತ್ರದಲ್ಲಿ 100 ಅಂಕ, ಗಣಿತ ದಲ್ಲಿ 100 ಅಂಕ, ರಸಾಯನ ಶಾಸ್ತ್ರ ವಿಷಯದಲ್ಲಿ 98 ಅಂಕಗಳನ್ನು ಗಳಿಸಿರುತ್ತಾನೆ.