ಎಸ್ಸಿ, ಎಸ್ಟಿ ವಿಭಾಗಕ್ಕೆ ಮಂಜುನಾಥ್
ಭದ್ರಾವತಿ: ಪಟ್ಟಣದ ತರೀಕೆರೆ ರಸ್ತೆಯಲ್ಲಿರುವ ಎಂ.ಎಂ. ಕಾಂಪೌಂಡ್ ವಾಸಿಯಾದ ಕೆ.ಟಿ. ಗಿರಿಯಪ್ಪ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಜಾತಿ ವಿಭಾಗದ ಸಮಿತಿಯ ಸಂಚಾಲಕರನ್ನಾಗಿ ಆಯ್ಕೆ ಮಾಡಿ ರಾಜ್ಯ ಸಮಿತಿ ಅಧ್ಯಕ್ಷ ಎನ್. ಮಂಜುನಾಥ್ ಆದೇಶ ಹೊರಡಿಸಿದ್ದಾರೆ.
ತಮ್ಮನ್ನು ಪರಿಶಿಷ್ಟ ಜಾತಿ ಸಮಿತಿಯ ಸಂಚಾಲಕರನ್ನಾಗಿ ಆಯ್ಕೆ ಮಾಡಿರುವುದಕ್ಕಾಗಿ ಕೆ.ಟಿ. ಗಿರಿಯಪ್ಪ ಪಕ್ಷದ ವರಿಷ್ಠರು ಮತ್ತು ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಸಮಿತಿ ಅಧ್ಯಕ್ಷ ಎನ್. ಮಂಜುನಾಥ್ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.