ಕಾರು ಡಿಕ್ಕಿ; ಗಾಯ
ಭದ್ರಾವತಿ: ಪಟ್ಟಣದ ಹೊರವಲಯದಲ್ಲಿರುವ ಬಾರಂದೂರು ಹತ್ತಿರ ಬೈಸಿಕಲ್ನಲ್ಲಿ ಹೋಗುತ್ತಿದ್ದ ಗಂಗಾನಾಯ್ಕ (45) ಎಂಬವನಿಗೆ ಮಾರುತಿ ಜೆನ್ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ಮಂಗಳವಾರ ಸಂಭವಿಸಿದೆ.
ಕಾಗದನಗರ ಪೊಲೀಸರು ಕಾರಿನ ಚಾಲಕ ಗೋವಿಂದರಾಜು ಮೇಲೆ ನಿರ್ಲಕ್ಷತನದ ವಾಹನ ಚಾಲನೆ ಪ್ರಕರಣ ದಾಖಲು ಮಾಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.