ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕ್ರಿಕೆಟ್: ಬೆಂಗಳೂರು ಗ್ರಾ. ತಂಡಕ್ಕೆ ಬಹುಮಾನ

Rashmi Kasaragodu
Updated On : 23 May 2013, 10:58 am

ಕ.ಪ್ರ.ವಾರ್ತೆ ಟಿ ಸಾಗರ ಟಿ  ಮೇ 22
ಪಟ್ಟಣದ ಶಾಂತಾವೇರಿ ಗೋಪಾಲಗೌಡ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಗುಡಿಗಾರ್ ಲೀಗಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬೆಂಗಳೂರು ಗ್ರಾಮಾಂತರ ತಂಡ (ಪ್ರಥಮ), ಶಿರಸಿ ಕ್ರಿಕೆಟ್ ತಂಡ (ದ್ವಿತೀಯ) ಬಹುಮಾನ ಪಡೆದುಕೊಂಡಿತು.
ಉಳಿದಂತೆ ಬೆಂಗಳೂರು ಗ್ರಾಮಾಂತರ ತಂಡದ ಸಾಗರ್ (ಪಂದ್ಯ ಪುರುಷೋತ್ತಮ), ಸಿರಸಿ ಕ್ರಿಕೆಟ್ ತಂಡದ ರೋಹಿತ್  (ಉತ್ತಮ ಬ್ಯಾಟ್ಸ್‌ಮನ್), ಬೆಂಗಳೂರು ಗ್ರಾಮಾಂತರ ತಂಡದ ರಾಘು (ಉತ್ತಮ ಬೌಲರ್), ಬೆಂಗಳೂರು ಗ್ರಾಮಾಂತರ ತಂಡದ ಪ್ರಜ್ವಲ್ (ಸರಣಿ ಶ್ರೇಷ್ಠ) ಹಾಗೂ ಬೊಂಬಾಯಿ ತಂಡವು ಉತ್ತಮ ತಂಡ ಪ್ರಶಸ್ತಿಯನ್ನು ಪಡೆದುಕೊಂಡಿತು.
ಸಮಾರೋಪದಲ್ಲಿ ಬಹುಮಾನ ವಿತರಿಸಿದ ಸಾಹಿತಿ ಡಾ. ನಾ. ಡಿಸೋಜ, ಒಂದು ಕಾಲದಲ್ಲಿ ಈ ನೆಲದ ಶ್ರೀಮಂತ ಕಲೆಗಳಲ್ಲಿ ಒಂದಾಗಿದ್ದ ಕರಕುಶಲ ಕಲೆ ಇಂದು ನೇಪಥ್ಯಕ್ಕೆ ಸರಿದಿದೆ. ಗುಡಿಗಾರರು ಕಚ್ಚಾವಸ್ತುವಾದ ಶ್ರೀಗಂಧದ ಕೊರತೆಯಿಂದಾಗಿ ಇತರೆ ಉದ್ಯೋಗದತ್ತ ವಲಸೆ ಹೋಗುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸಿ ನಿಮ್ಮಲ್ಲಿರುವ ವೈಶಿಷ್ಟ್ಯಪೂರ್ಣ ಕಲೆಯನ್ನು ನೇಪಥ್ಯಕ್ಕೆ ಸರಿಯಲು ಬಿಡಬೇಡಿ ಎಂದು ಹೇಳಿದರು.
ಅದನ್ನು ನಿಮ್ಮ ಮಕ್ಕಳಿಗೂ ಕಲಿಸುವ ಕುರಿತು ಚಿಂತನೆ ನಡೆಸಿ ಎಂದು ಸಲಹೆ ಮಾಡಿದರು.
ಅಖಿಲ ಭಾರತ ಗುಡಿಗಾರರ ಸಮಾಜದ ಅಧ್ಯಕ್ಷ ಹರೀಶ್ ಎಲ್. ಶೆಟ್ಟಿ, ಉಪಾಧ್ಯಕ್ಷ ಡಿ.ಎಂ. ಗಜಾನನ, ಗುರುಮೂರ್ತಿ, ಗುಡಿಗಾರರ ನೌಕರರ ಹಾಗೂ ಉದ್ಯಮಿಗಳ ಟ್ರಸ್ಟ್ ಅಧ್ಯಕ್ಷ ಡಾ. ಬಾಲಚಂದ್ರ ಬಾಂಡೋಡ್ಕರ್ ಹಾಜರಿದ್ದರು. ಶಶಿಧರ್ ಕಾಶಿ ಸ್ವಾಗತಿಸಿದರು.
ಪ್ರಭಾಕರ ಎಸ್.ಆರ್. ವಂದಿಸಿದರು. ಲೋಕೇಶ ಕುಮಾರ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement