ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಹಣಗೆರೆ ಕಟ್ಟೆಯಲ್ಲಿ ಉರೂಸ್

Rashmi Kasaragodu
Updated On : 23 May 2013, 11:01 am

ಶಿವಮೊಗ್ಗ: ತೀರ್ಥಹಳ್ಳಿ ತಾಲೂಕು ಹಜರತ್ ಸೈಯ್ಯದ್ ಸಾದತ್ ಸ್ವಾಮಿ ದರ್ಗಾ, ಭೂತರಾಯ ಚೌಡೇಶ್ವರಿ ದೇವಸ್ಥಾನ ಹಣಗೆರೆ ಕಟ್ಟೆಯಲ್ಲಿ ಗಂಧ ಉತ್ಸವ ಮತ್ತು ಉರುಸ್ ಉತ್ಸವವನ್ನು ಮೇ 30ರಂದು ಏರ್ಪಡಿಸಲಾಗಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಹಿಜರಿ 1434ನೇ ತಿಂಗಳು ರಜಾಬ್ ಚಾಂದ್ 19ರ ಗಂಧ ಉತ್ಸವ ಮತ್ತು ಉರುಸ್‌ನ್ನು ಮೇ 30ರ ಮಧ್ಯಾಹ್ನ 3ಗಂಟೆಗೆ ಬಸವನಗದ್ದೆ ಬಿ.ಪಿ. ತಿಮ್ಮಪ್ಪಯ್ಯನವರ ಮನೆಯಿಂದ ಶ್ರೀಗಂಧ ಪ್ರಸಾದ ತಂದ ನಂತರ ಸಂಜೆ 7 ಗಂಟೆಗೆ ನಮಾಜ್ ನಂತರ ಗಂಧ ಏರಿಸಲ್ಪಡುತ್ತದೆ.
ಜರಬ್ ಮತ್ತು ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಭಕ್ತಾದಿಗಳಿಗೆ ಅಂದು ರಾತ್ರಿ ಅನ್ನಸಂತರ್ಪಣೆ ಹಾಗೂ ದೇವಸ್ಥಾನದ ಸಭಾಂಗಣದಲ್ಲಿ ಕವಾಲಿ ಕಾರ್ಯಕ್ರಮ ಏರ್ಪಡಿಸಿದೆ. ಭಕ್ತಾದಿಗಳು ಪಾಲ್ಗೊಳ್ಳುವಂತೆ ಆಗಮಿಸುವಂತೆ ಸೈಯ್ಯದ್ ಸಾದತ್ ದರ್ಗಾ, ಶ್ರೀ ಭೂತರಾಯ ಚೌಡೇಶ್ವರಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement