ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಉತ್ತಮ ಮಳೆ: ಹೊಲ ಹಸನು ಮಾಡುವಲ್ಲಿ ರೈತ ಬ್ಯುಸಿ

Rashmi Kasaragodu
Updated On : 24 May 2013, 11:12 am

ಕ.ಪ್ರ.ವಾರ್ತೆ, ಚನ್ನಗಿರಿ, ಮೇ 23
ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು ಬಹುತೇಕ ಸಣ್ಣ-ಪುಟ್ಟ ಕೆರೆ-ಕಟ್ಟೆಗಳು ತುಂಬಿಕೊಂಡಿವೆ, ಕೃಷಿಯಾಧಾರಿತ ರೈತಾಪಿ ಜನರು ತಮ್ಮ ಹೊಲಗಳನ್ನು ಹಸನು ಮಾಡಿಕೊಳ್ಳುತ್ತಿದ್ದಾರೆ.
ವಾಡಿಕೆ ಮಳೆಯಾಗಿ ಜನವರಿ ತಿಂಗಳಿನಿಂದ ಮೇ ತಿಂಗಳ ಇಲ್ಲಿಯವರೆಗೆ 129.3ಮಿ.ಮೀ. ಮಳೆಯಾಗಬೇಕಿತ್ತು, ಪ್ರಸ್ತುತ ಇಲ್ಲಿಯವರೆಗೆ 111.72 ಮಿ.ಮೀ.ಮಳೆಯಾಗಿದೆ.
ತಾಲೂಕಿನಲ್ಲಿ ಕೃಷಿ ಮತ್ತು ನೀರಾವರಿ ಪ್ರದೇಶ ಸೇರಿ 56 ಸಾವಿರ ಹೆಕ್ಟರ್ ಭೂ ಪ್ರದೇಶವಿದ್ದು, 12,665ಹೆಕ್ಟರ್ ಪ್ರದೇಶದಲ್ಲಿ ಭತ್ತದ ಬೆಳೆ, 2,750 ಹೆಕ್ಟರ್ ಪ್ರದೇಶದಲ್ಲಿ ಜೋಳ, 3,600 ಹೆಕ್ಟರ್ ಪ್ರದೇಶದಲ್ಲಿ ರಾಗಿ, 32,605 ಹೆಕ್ಟರ್ನಲ್ಲಿ ಮೆಕ್ಕೇಜೋಳ, 680 ಹೆಕ್ಟರ್ನಲ್ಲಿ ಅವರೆ, 200 ಹೆಕ್ಟರ್ನಲ್ಲಿ ಶೇಂಗಾ, 450 ಹೆಕ್ಟರ್ನಲ್ಲಿ ಎಳ್ಳು, 1200 ಹೆಕ್ಟರ್ನಲ್ಲಿ ಹತ್ತಿ ಬೆಳೆಯನ್ನು ಬೆಳೆಯಲು ರೈತರುಗಳಿಗೆ ಶಿಫಾರಸು ಮಾಡಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಕಮಲಾನಾಯ್ಕ ತಿಳಿಸಿದ್ದಾರೆ.
ಈ ಎಲ್ಲಾ ಬೆಳೆಯ ಬೀಜಗಳು ಮತ್ತು ಎಲ್ಲಾ ಪ್ರಕಾರಗಳ ರಸಗೊಬ್ಬರಗಳು ತಾಲೂಕಿನಲ್ಲಿರುವ 12 ಬೀಜ ಬಿತ್ತನೆ ಕೇಂದ್ರಗಳಲ್ಲಿ ದೊರೆಯಲಿವೆ. ಬಿತ್ತನೆ ಬೀಜಗಳನ್ನು ಸಬ್ಸಿಡಿ ದರದಲ್ಲಿ ನೀಡಲಿದ್ದು ರೈತರು ಗೊಬ್ಬರ ಮತ್ತು ಬೀಜಗಳನ್ನು ಆತಂಕಗಳಿಲ್ಲದೆ ಪಡೆಯಬಹುದು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement