ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸಾವಿರ ಪುರುಷರಿಗೆ 995 ಮಹಿಳೆಯರು

Rashmi Kasaragodu
Updated On : 24 May 2013, 11:10 am

ಕ.ಪ್ರ.ವಾರ್ತೆ, ಶಿವಮೊಗ್ಗ, ಮೇ 23
ಜಿಲ್ಲೆಯ ಜನತೆಗೆ ಸಿಹಿ ಸುದ್ದಿ. ಜಿಲ್ಲೆಯ ಪುರುಷರು ಹಾಗೂ ಮಹಿಳೆಯರ ಅನುಪಾತ ಗಣನೀಯವಾಗಿ ಕಡಿಮೆಯಾಗಿದೆ. 2011ರ ಜನಗಣತಿಯಂತೆ ಪ್ರತಿ 1,000 ಪುರುಷರಿಗೆ 995 ಮಹಿಳೆಯರಿದ್ದಾರೆ. 2001ರ ಜನಗಣತಿಯಲ್ಲಿ ಈ ಅನುಪಾತ 978 ಇತ್ತು. ಈ ದಿಸೆಯಲ್ಲಿ ಲಿಂಗಾನುಪಾತ ಕಡಿಮೆಯಾಗಿರುವುದು ಆರೋಗ್ಯಕರ ಲಕ್ಷಣವಾಗಿದೆ.
ರಾಜ್ಯ ಜನಗಣತಿ ನಿರ್ದೇಶಕ ಟಿ.ಕೆ. ಅನಿಲ್ ಕುಮಾರ್ ಅವರು ಗುರುವಾರ ಬಿಡುಗಡೆ ಮಾಡಿರುವ ಜನಗಣತಿಯ ಪ್ರಾಥಮಿಕ ಮಾಹಿತಿಯಲ್ಲಿ ಈ ಅಂಶ ಪ್ರಸ್ತಾಪವಾಗಿದೆ. 2011ರಲ್ಲಿ ಲಿಂಗಾನುಪಾತ ರಾಜ್ಯದ ಸರಾಸರಿ 1,000 ಪುರುಷರಿಗೆ 973 ಇದ್ದು, ಜಿಲ್ಲೆಯ ಅನುಪಾತ ಇದಕ್ಕಿಂತ ಹೆಚ್ಚಿರುವುದು ವಿಶೇಷ.
ನಗರದಲ್ಲಿ ಮಹಿಳೆಯರು: ಇದರ ಜತೆಗೆ ಜಿಲ್ಲೆಯಲ್ಲಿ ನಗರ ಪ್ರದೇಶದಲ್ಲಿರುವ ಜನಸಂಖ್ಯೆಗಿಂತ ಗ್ರಾಮೀಣ ಪ್ರದೇಶದಲ್ಲಿರುವ ಜನಸಂಖ್ಯೆಯೇ ಹೆಚ್ಚು. 11,29,026 ಜನರು ನಗರದಲ್ಲಿದ್ದರೆ, 6,23,727 ಜನರು ಗ್ರಾಮೀಣ ಪ್ರದೇಶದಲ್ಲಿದ್ದಾರೆ. ಇದರಲ್ಲಿ ಇನ್ನೊಂದು ವಿಶೇಷವೆಂದರೆ ನಗರ ಪ್ರದೇಶದಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆ ಹೆಚ್ಚು.
ಜಿಲ್ಲೆಯಲ್ಲಿ 6 ವರ್ಷದೊಳಗಿನ ಮಕ್ಕಳ ಸಂಖ್ಯೆ 1,82,751. ಇವರಲ್ಲಿ 93,221 ಗಂಡು ಮಕ್ಕಳಾಗಿದ್ದರೆ, 89,530 ಹೆಣ್ಣುಮಕ್ಕಳು.
ಆದರೆ ಜನಸಂಖ್ಯೆ ವೃದ್ಧಿ ದರ ಕಡಿಮೆಯಾಗಿದೆ. 1991-2001ರ ವರೆಗೆ ಈ ದರ 13,10 ಇತ್ತು. 2001ರಿಂದ 2011ರ ವರೆಗೆ ಈ ದರ 6.88 ಆಗಿದೆ. ಆದರೆ 2001ರಲ್ಲಿ ಒಂದು ಚದರ ಕಿ.ಮೀ. ಪ್ರದೇಶದಲ್ಲಿ 194 ಜನರಿದ್ದರು. ಈ ಬಾರಿ ಈ ಸಂಖ್ಯೆ 2007ಕ್ಕೆ ಏರಿದೆ.
ಜಾತಿ ಲೆಕ್ಕಾಚಾರ: ಈ ಬಾರಿ ಜನಗಣತಿ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಹಾಗೂ ವರ್ಗದ ಜನರ ಸಂಖ್ಯೆಯನ್ನೂ ಪರಿಗಣಿಸಲಾಗಿತ್ತು. ಅದರಂತೆ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯ 3,08,158 ಜನರಿದ್ದರೆ, ಎಸ್ಟಿ 65,412 ಜನರಿದ್ದಾರೆ.
ಸಾಕ್ಷರತೆ: ಜಿಲ್ಲೆಯಲ್ಲಿ ಒಟ್ಟು 12,63,016 ಸಾಕ್ಷರರಿದ್ದಾರೆ. ಇವರಲ್ಲಿ 6.74,938 ಪುರುಷರು, 5,88,078 ಪುರುಷರು. ಇದರಂತೆ ಸಾಕ್ಷರತೆ ಪ್ರಮಾಣ ಶೇಕಡ 72.05. ಇದರಲ್ಲಿ ಪುರುಷರದೇ ಮೇಲುಗೈ. ಇವರಲ್ಲಿ ಶೇಕಡಾ 76.92 ಮಂದಿ ಸಾಕ್ಷರರಾಗಿದ್ದಾರೆ. ಮಹಿಳೆಯರ ಶೇಕಡಾವಾರು ಪ್ರಮಾಣ 67.18.
2001ರ ಜನಗಣತಿಗೆ ಹೋಲಿಸಿದರೆ ಸಾಕ್ಷರತೆ ಪ್ರಮಾಣ ಕುಸಿದಿದೆ. ಅಂದು ಶೇಕಡ 74.52ರಷ್ಟು ಸಾಕ್ಷರತೆ ಇತ್ತು. ಸುಮಾರು ಶೇ.2ರಷ್ಟು ಕಡಿಮೆಯಾಗಿದೆ. ಪುರುಷರ ಸಾಕ್ಷರತೆ ಪ್ರಮಾಣ ಹೆಚ್ಚಾಗಿದೆ. ಆತಂಕದ ಸಂಗತಿ ಎಂದರೆ ಮಹಿಳೆಯರು ಹೆಚ್ಚು ಸಾಕ್ಷರರಾಗುತ್ತಿಲ್ಲ. ಜಿಲ್ಲೆಯಲ್ಲಿರುವ ಉದ್ಯೋಗಿಗಳ ಸಂಖ್ಯೆ 7,80,598. ಆದರೆ ಇದಕ್ಕಿಂತ ಹೆಚ್ಚು ನಿರುದ್ಯೋಗಿಗಳಿದ್ದಾರೆ. ಇವರ ಸಂಖ್ಯೆ 9,72,155.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement