ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕಸ ವಿಲೇವಾರಿಗೆ ಆಗ್ರಹ

Lingaraj Badiger
Updated On : 25 May 2013, 11:04 am

ಸೊರಬ:ಪಪಂ ಚುನಾವಣೆ ನಡೆದು ಕೆಲವು ತಿಂಗಳಾದರೂ ಆಡಳಿತ ಮಂಡಳಿ ಘೋಷಣೆ ಆಗದಿರುವ ಹಿನ್ನೆಲೆಯಲ್ಲಿ ಪಟ್ಟಣ ಜೀವನ ಹೈರಾಣಾಗಿದೆ.
ಒಂದೆಡೆ ಕುಡಿಯುವ ನೀರಿಗೆ ಪರದಾಟ, ಇನ್ನೊಂದೆಡೆ ಕಸದ ವಿವೇವಾರಿ ಆಗದೆ ಕೊಳೆತು ನಾರುತ್ತಿರುವ ಚರಂಡಿ ದುರ್ನಾತದ ಸೇವನೆಯೊಂದಿಗೆ, ಸಾಂಕ್ರಮಿಕ ರೋಗದ ಭೀತಿ. ಸಾಲದೆಂಬಂತೆ ಪಟ್ಟಣದ ಕೆಲವೆಡೆ ವಾಂತಿ, ಬೇಧಿ ಕಾಣಿಸಿಕೊಂಡಿದ್ದು, ಡೆಂಘೀ, ಕಾಲರಾ ಬಗ್ಗೆ ಆತಂಕಪಡುವಂತಾಗಿದೆ.
  ಸಾಂಕ್ರಮಿಕ ರೋಗ ಹರಡುವ ಭೀತಿಯಿಂದ ನಿದ್ರೆ ಇಲ್ಲದಂತಾಗಿದೆ. ಕೂಡಲೇ ತ್ಯಾಜ್ಯ ತೆಗೆದು ನೆಮ್ಮದಿ ಒದಗಿಸಿಕೊಡಿ ಎಂದು ಪಪಂ ಸಾರ್ವಜನಿಕರು ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಅಸಮರ್ಪಕ ಬಾಕ್ಸ್ ಚರಂಡಿ: ಪಟ್ಟಣದ ಮುಖ್ಯರಸ್ತೆ ಹಾಗೂ 10 ನೇ ವಾರ್ಡ್‌ನಲ್ಲಿ ಬಹಳಷ್ಟು ಮಾಂಸಹಾರಿ, ಸಸ್ಯಹಾರಿ ಹೋಟೆಲ್‌ಗಳಿದ್ದು, ಇಲ್ಲಿನ ನಿರುಪಯುಕ್ತ ವಸ್ತುಗಳು ನೇರ ಚಿಕ್ಕಪೇಟೆ ಹಳೇಪೋಸ್ಟ್ ಆಫೀಸ್ ಬಳಿಯ ಚರಂಡಿಗೆ ಸೇರುತ್ತಿರುತ್ತಿದೆ. ಕಳೆದ ಸಾಲಿನಲ್ಲಿ ಅಸಮರ್ಪಕ ಬಾಕ್ಸ್ ಚರಂಡಿ ನಿರ್ಮಾಣದಿಂದಾಗಿ ಅಲ್ಲಿ ಕೊಳಚೆಗಟ್ಟಿ ದುರ್ನಾತ ಬೀರುತ್ತಿದೆ.  ಪಪಂ ಆರೋಗ್ಯಾಧಿಕಾರಿಗಳು ಕೂಡ ಇತ್ತ ತಲೆಹಾಕಿಲ್ಲ, ಗಟ್ಟಿಯಾಗಿ ಕೇಳಿದರೆ ಚರಂಡಿ ವ್ಯವಸ್ಥೆ ಪೂರ್ಣಗೊಳ್ಳಲಿ ಎಂದು ಹಾರಿಕೆ ಉತ್ತರ ನೀಡುತ್ತಾರೆ ಎಂದಿರುವ ಅಲ್ಲಿನ ನಿವಾಸಿಗಳು ಬೇಸರಿಸಿದ್ದಾರೆ.
ದುರ್ವಾಸನೆ: ಈಚೆಗೆ ಇಲ್ಲಿನ ಕುಡಿಯುವ ನೀರಿನ ನಲ್ಲಿಯಲ್ಲಿಯೂ ದುರ್ವಾಸನೆ ಕಾಣಿಸಿಕೊಳ್ಳುತ್ತಿದೆ, ಸ್ನಾನ ಮಾಡಿದ ಬಳಿಕ ಚರ್ಮದಲ್ಲಿ ಉರಿ ಕಾಣಿಸಿಕೊಳ್ಳುತ್ತಿದೆ, ಜನಪ್ರತಿನಿಧಿಗಳು ತಮಗೂ, ಪಟ್ಟಣದ ಸ್ವಚ್ಛತೆಗೂ ಏನೂ ಸಂಬಂಧವೆ ಇಲ್ಲ ಎನ್ನುವಂತೆ ನಿರುಮ್ಮಳರಾಗಿದ್ದಾರೆ ಎಂದು ಆಕ್ಷೇಪಿಸಿರುವ ಅವರು, ಕೂಡಲೆ ಸ್ವಚ್ಚತೆಗೆ ನಿಗಾವಹಿಸದೆ ಇದ್ದಲ್ಲಿ ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement